

ಬೆಂಗಳೂರು: ಹಂಪಿನಗರ ಸಮೀಪದ ರೈಲು ಹಳಿ ಮೇಲೆ ಪತ್ತೆಯಾಗಿದ್ದ ಅಪರಿಚಿತ ಶವದ ಕೊಲೆ ರಹಸ್ಯ ಬಯಲಾಗಿದೆ.
ಯಶವಂತಪುರದ ಆರ್ಎಂಸಿ ಯಾರ್ಡ್ ನಿವಾಸಿ ಅಫ್ರೋಜ್ (34) ಕೊಲೆಯಾದವ. ಸಲಿಂಗಕಾಮ ತೊರೆದು ಯುವತಿಯ ಹಿಂದೆ ಹೋದನೆಂಬ ಕಾರಣಕ್ಕೆ ಅಫ್ರೋಜ್ನನ್ನು ಈತನ ಸ್ನೇಹಿತ ಸಿದ್ದಿಕಿಯೇ ಹತ್ಯೆ ಮಾಡಿದ್ದಾನೆ. ಸಿದ್ದಿಕಿಗೆ ಹಣದಾಸೆ ತೋರಿಸಿ ಅವನೊಂದಿಗೆ ಅಪ್ರೋಜ್ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಬಿಹಾರ ಮೂಲದ ಅಫ್ರೋಜ್, ಹಲವು ವರ್ಷಗಳಿಂದ ಯಶವಂತಪುರದ ಆರ್ಎಂಸಿ ಯಾರ್ಡ್ನಲ್ಲಿ ಹೋಟೆಲ್ ನಡೆಸುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರಾಗಿ ಹೋಟೆಲ್ನಲ್ಲೇ ನೆಲೆಸಿದ್ದ. ಕೆಲ ವರ್ಷಗಳ ಹಿಂದೆ ಮಸೀದಿಯಲ್ಲಿ ಶಾಲೆಯ ಸ್ನೇಹಿತ ಸಿದ್ದಿಕಿ ಸಿಕ್ಕಿದ್ದ. ಇಬ್ಬರ ನಡುವೆ ಆತ್ಮೀಯತೆ ಮೂಡಿ ಸಲಿಂಗಕಾಮಕ್ಕೂ ತಿರುಗಿತ್ತು.
ಸಿದ್ದಿಕಿಗೆ ಹಣದಾಸೆ ತೋರಿಸಿ ಆತನ ಜತೆ ಅಫ್ರೋಜ್ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇತ್ತೀಚೆಗೆ ಅಫ್ರೋಜ್ಗೆ ಯುವತಿಯೊಬ್ಬಳ ಸ್ನೇಹ ಬೆಳೆದು ಆಕೆಯ ಜತೆ ಸಲುಗೆಯಿಂದ ಇರಲು ಯತ್ನಿಸುತ್ತಿದ್ದ. ಇದಕ್ಕೆ ಸಿದ್ದಿಕಿ ವಿರೋಧ ವ್ಯಕ್ತಪಡಿಸಿದ್ದರೂ ಅಪ್ರೋಜ್ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ ಸಿದ್ದಿಕಿ, ತನ್ನ ಸ್ನೇಹಿತರ ಜತೆ ಸೇರಿ ಅಫ್ರೋಜ್ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಜ.2ರ ರಾತ್ರಿ ಹಂಪಿನಗರದ ಶ್ರೀ ಕೃಷ್ಣದೇವರಾಯ ರೈಲು ನಿಲ್ದಾಣ ಬಳಿಗೆ ಬರುವಂತೆ ಅಫ್ರೋಜ್ಗೆ ಸಿದ್ದಿಕಿ ಸೂಚಿಸಿದ್ದ. ಪೂರ್ವನಿಯೋಜನೆಯಂತೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ರೈಲು ಹಳಿಗಳ ಮೇಲೆ ಶವ ಎಸೆದು ಪರಾರಿಯಾಗಿದ್ದರು. ರೈಲು ಹರಿದು ಮೃತದೇಹ ತುಂಡಾಗಿತ್ತು. ಇದನ್ನೂ ಓದಿರಿ ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ
ಹತ್ಯೆ ಬಳಿಕ ಆರೋಪಿಗಳು, ಅಫ್ರೋಜ್ ಬಟ್ಟೆ ಮತ್ತು ಶೂಗಳನ್ನು ಸುಟ್ಟು ಹಾಕಿದ್ದರು. ಪಿಎಸ್ಐ ಭಾರತಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ರುಂಡ-ಮುಂಡ ಬೇರ್ಪಟ್ಟಿದ್ದ ಅಪರಿಚಿತ ಶವದ ಗುರುತು ಪತ್ತೆಹಚ್ಚಿದ್ದರು. ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಪೊಲೀಸರಿಗೆ ಮೊಬೈಲ್ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಸಾವಿಗೆ ಬಲವಂತ ಆಯುಧದಿಂದ ಹಲ್ಲೆಯಾಗಿದೆ ಎಂದು ವೈದ್ಯರು ವರದಿ ಸಲ್ಲಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ಮೊಬೈಲ್ಗೆ ಬಂದಿದ್ದ ಕೊನೇ ಕರೆಯ ಬೆನ್ನತ್ತಿದ್ದಾಗ ಪಾದರಾಯನಪುರದ ಸಿದ್ದಿಕಿ ಸಿಕ್ಕಿಬಿದ್ದಿದ್ದಾನೆ. ಆತ ಕೊಟ್ಟ ಮಾಹಿತಿ ಮೇರೆಗೆ ಖಲೀಲ್ ಹಾಗೂ ಮುಬಾರಕ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.