

ಸುಳ್ಯ: ಸುಳ್ಯ ತಾಲೂಕಿನಲ್ಲಿ ಹಮ್ಮಿಕೊಳ್ಳುವ ಕಬಡ್ಡಿ ಪಂದ್ಯಾಟದ ಸಂಘಟಕರು ತಾಲೂಕು ಅಸೋಸಿಯೇಷನ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಸುಳ್ಯ ತಾಲೂಕಿನ ವಿವಿಧ ಕ್ರೀಡಾ ಸಂಘಗಳು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಮಾಧವ ಹೇಳಿದರು.
ನಗರದಲ್ಲಿ ಶನಿವಾರ ನಡೆದ ತಾಲೂಕು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸುಳ್ಯ ತಾಲೂಕಿನಲ್ಲಿ ಭಾಗವಹಿಸುವ ಕ್ರೀಡಾ ಸಂಘಗಳ ಹಾಗೂ ತೀರ್ಪುಗಾರರ ಸಭೆಯಲ್ಲಿ ಮಾತನಾಡಿದರು.
ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯಲ್ಲಿ ಸದಸ್ಯರಾದವರು ಮಾತ್ರ ತೀರ್ಪುಗಾರರಾಗಿ ಭಾಗವಹಿಸಬೇಕು. ಸಭೆಯ ಈ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಸುಳ್ಯ ತಾಲೂಕು ತೀರ್ಪುಗಾರರ ಮಂಡಳಿ ಅಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು, ಸಂಚಾಲಕ ನಿತಿನ್ ಮಜಿಕೋಡಿ ಉಪಸ್ಥಿತರಿದ್ದರು. ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಉಮೇಶ್ ಪಂಜದಬೈಲು ಸ್ವಾಗತಿಸಿದರು. ಕೋಶಾಧಿಕಾರಿ ಕೊರಗಪ್ಪ ಬೆಳ್ಳಾರೆ ವಂದಿಸಿದರು.