ಪುಂಜಾಲಕಟ್ಟೆಯಲ್ಲಿ ಜನೌಷಧ ಕೇಂದ್ರ

Btw_Janaoushadha
Published on

ಬಂಟ್ವಾಳ: ಪ್ರಧಾನಮಂತ್ರಿ ಜನ ಔಷಧ ಕೇಂದ್ರ ಘಟಕ ಪುಂಜಾಲಕಟ್ಟೆಯಲ್ಲಿ ಆರಂಭಗೊಂಡಿದೆ. ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ಕೇಂದ್ರ ಉದ್ಘಾಟಿಸಿ ಮಾತನಾಡಿ ಪ್ರಧಾನಮಂತ್ರಿಗಳ ಕನಸಿನ ಯೋಜನೆ ನಮ್ಮ ಊರಿನಲ್ಲೂ ಸಾಕರಗೊಂಡಿದೆ, ಗುಣಮಟ್ಟದ ಔಷಧಗಳು ಈ ಕೇಂದ್ರದಲ್ಲಿ ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಸ್ಥಳೀಯರು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ಪ್ರಮುಖರಾದ ಜನಾರ್ಧನ ಪೂಜಾರಿ,ದಿನೇಶ ಪಾಂಗಾಳ, ಧನವತಿ ಹಾಗೂ ಕೇಂದ್ರದ ಸಿಬ್ಬಂದಿ ದೀಪ ಪ್ರಜ್ವಲನೆ ಮಾಡಿದರು. ಯುವ ವಕೀಲ ತಾಜುದ್ದೀನ್ ಉಚಿತ ಇ. ಸಿ. ಜಿ. ಸೌಲಭ್ಯವನ್ನು ಉದ್ಘಾಟಿಸಿದರು.್ಲ ರಾಜಕೇಸರಿ ಸಂಘಟನೆಯ ದೀಪಕ್ ಜಿ. ಹಾಗೂ ರವಿ ನಾಯ್ಕ, ಪುರುಷೋತ್ತಮ್ ವಾಮದಪದವು ,ಬಂಟ್ವಾಳ ಕುಲಾಲ ಯುವ ವೇದಿಕೆ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಮಯ್ಯ ಬೊಟ್ಟುಮನೆ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ನ ಮಡಂತ್ಯಾರು ಶಾಖೆಯ ವ್ಯವಸ್ಥಾಪಕ ರಕ್ಷಿತ್ ಕಲಾಕುಂಜ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜನಔಷಧಿ ಕೇಂದ್ರದ ಮಾಲೀಕ ಮನೋಜ್ ಕುಲಾಲ್ ಬಸಬೈಲು ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net