ರಾಜ್ಯದಲ್ಲಿ ಪೆರಿಟೋನೀಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ

Peritoneal Dialysis
Published on

ಬೆಂಗಳೂರು: ರಾಜ್ಯದಲ್ಲಿ ಪೆರಿಟೋನೀಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುವ ಸರ್ಕಾರ, ಮೊದಲಿಗೆ 350 ರೋಗಿಗಳಿಗೆ ಸೇವೆ ಒದಗಿಸಲು ಅಗತ್ಯ ಸಾಮಗ್ರಿಗಳನ್ನು ಕೆಎಸ್‌ಎಂಎಸ್‌ಸಿಎಲ್ ಮೂಲಕ ಖರೀದಿಸುವಂತೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಈಗಾಗಲೇ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಎಲ್ಲಾ ಜಿಲ್ಲೆಗಳಲ್ಲಿ ಹೀಮೊಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಇದೀಗ ನ್ರೆಾಲಜಿಸ್ಟ್ ತಜ್ಞರು ಇರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಪೆರಿಟೋನೀಯಲ್ ಡಯಾಲಿಸಿಸ್ ಸೇವೆ ಒದಿಸಲಾಗುತ್ತಿದೆ. ಆರಂಭದಲ್ಲಿ ಪ್ರತಿ ಜಿಲ್ಲೆಗೆ ಅಂದಾಜು 10 ರೋಗಿಗಳಂತೆ 350 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗುವುದು. ರೋಗಿಗಳ ಆಯ್ಕೆಯನ್ನು ತಜ್ಞರಿಗೆ ಮೂಲಕ ಮಾಡಲಾಗುವುದು.

ಕ್ಯಾಥಟೆರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ ಸೆಷನ್ ಸೇರಿ ಪ್ರತಿ ರೋಗಿಗೆ 13 ಸಾವಿರ ರೂ. ವೆಚ್ಚವಾಗಲಿದ್ದು, ಇದನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ವತಿಯಿಂದ ಭರಿಸಲಾಗುವುದು.

ಪ್ರತಿ ರೋಗಿಗೆ ತಿಂಗಳಿಗೆ 90-120 ಪೆರಿಟೋನೀಯಲ್ ಡಯಾಲಿಸಿಸ್ ಬ್ಯಾಗ್‌ಗಳು ಮತ್ತು ಅಗತ್ಯ ಸಾಮಗ್ರಿಗಳು ಅವಶ್ಯಕತೆ ಇದ್ದು, ಅವುಗಳನ್ನು ಕೆಎಸ್‌ಎಂಎಸ್‌ಸಿಎಲ್ ಮೂಲಕ ಖರೀದಿಸಲಾಗುವುದು. ಬ್ಯಾಗ್‌ಗಳು ಮತ್ತು ಅಗತ್ಯ ಸಮಾಗ್ರಿಗಳಿಗೆ ಪ್ರತಿ ತಿಂಗಳು ರೋಗಿಯೊಬ್ಬರಿಗೆ 26,400 ರೂ.ನಂತೆ 6 ತಿಂಗಳಿಗೆ ಒಟ್ಟು 5.54 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಇದನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net