ಕ್ರೀಡಾಕೂಟದಲ್ಲಿ ಸೇಂಟ್ ಜಾನ್ಸ್ ವಿದ್ಯಾರ್ಥಿಗಳ ಸಾಧನೆ

IMG_20240901_121044
Published on

ಗಂಡಸಿ: ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ಗಂಡಸಿ ಹೋಬಳಿ ಮಟ್ಟದ ಪ್ರೌಢಶಾಲೆಗಳ 2024-25ನೇ ಸಾಲಿನ ಕ್ರೀಡಾಕೂಟದಲ್ಲಿ ಗಂಡಸಿ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.


ಬಾಲಕ, ಬಾಲಕಿಯರ ಗುಂಡು ಎಸೆತದಲ್ಲಿ ಮುರಳಿ ಮತ್ತು ರಿಷಿಕಾ(ಪ್ರ), ಹೇಮಂತ್ ಮತ್ತು ವಿದ್ಯಾಶ್ರೀ(ದ್ವಿ), ಬಾಲಕಿಯರ ತಟ್ಟೆ ಎಸತ ತನುಶ್ರೀ(ಪ್ರ), ಚಂದನಾ(ದ್ವಿ) ಬಾಲಕರ ತಟ್ಟೆ ಎಸತ ಹೇಮಂತ್(ಪ್ರ) ಬಾಲಕಿಯರ ಉದ್ದ ಜಿಗಿತ ವರ್ಷಿಣಿ (ಪ್ರ), ಬಾಲಕರ 100 ಮೀ.ಓಟ ಸಂಜಯ್(ಪ್ರ), ಬಾಲಕಿಯರ ಹ್ಯಾಮರ್ ಎಸೆತ ತನುಶ್ರೀ(ಪ್ರ), ಬಾಲಕರ ಕಬಡ್ಡಿ ಶ್ರೇಯಸ್ ತಂಡ(ಪ್ರ), ಬಾಲಕಿಯರ ಕಬಡ್ಡಿ ಮಾನ್ಯಶ್ರೀ ತಂಡ (ಪ್ರ), ಬಾಲಕಿಯರ ಥ್ರೋಬಾಲ್‌ನಲ್ಲಿ ಸಹನಾ ತಂಡ (ಪ್ರ), ಬಾಲಕರ ಖೋ ಖೋ ಕೀರ್ತಿ ತಂಡ (ದ್ವಿ), ಬಾಲಕರ ವಿಭಾಗದಲ್ಲಿ ವಿವಿಧ ಕ್ರೀಡೆಗಳಲ್ಲಿ 44 ಅಂಕ, ಬಾಲಕಿಯರ ವಿಭಾಗದಲ್ಲಿ 30 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.


ಸಂಸ್ಥೆಯ ಮುಖ್ಯಸ್ಥ ಡಾ.ವಿ.ಕೆ.ವೆಂಕಟೇಶ್, ಕ್ರೀಡಾ ತರಬೇತಿದಾರರಾದ ದೈಹಿಕ ಶಿಕ್ಷಣ ಶಿಕ್ಷಕ ದುರ್ಗೇಶ್, ವಿಘ್ನೇಶ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net