ಕಬಡ್ಡಿಯಲ್ಲಿ ಸಾಬ್ರಕಟ್ಟೆ ಶಾಲೆ ವಿದ್ಯಾರ್ಥಿಗಳ ಸಾಧನೆ

saibrakatte
ಮೈಸೂರು ವಿಭಾಗ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ತಂಡ.
Published on

ಕೊಕ್ಕರ್ಣೆ: 14ರ ವಯೋಮಾನದ ಬಾಲಕರ ಕಬಡ್ಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಬ್ರಕಟ್ಟೆ ರೋಹಿತ್ ನಾಯಕತ್ವದ ತಂಡ ಚಿಕ್ಕಮಗಳೂರಿನ ಕಡೂರಿನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಂಡ ತೃತೀಯ ಸ್ಥಾನ ಪಡೆಯಿತು.

ದೈಹಿಕ ಶಿಕ್ಷಕ ಗಜೇಂದ್ರ ಶೆಟ್ಟಿ ತರಬೇತಿ ನೀಡಿದ್ದರು. ತಂಡ ಪ್ರಥಮ ಪಂದ್ಯಾಟದಲ್ಲಿ ಮೈಸೂರಿನ ವಿರುದ್ಧ 40-08ರ ಅಂತರದಲ್ಲಿ ಗೆದ್ದು ಸೆಮಿಫೈನಲ್ ತಲುಪಿತ್ತು. ಸೆಮಿಫೈನಲ್‌ನಲ್ಲಿ ಮಂಡ್ಯದ ವಿರುದ್ಧ 08 ಅಂಕಗಳ ಅಂತರದಲ್ಲಿ ಸೋಲು ಕಂಡಿತು. ಮೂರನೇ ಸ್ಥಾನಕ್ಕಾಗಿ ಹಾಸನ ತಂಡದ ವಿರುದ್ಧ ನಡೆದ ಪಂದ್ಯಾಟದಲ್ಲಿ 45-21ರ ಅಂತರದಲ್ಲಿ ಗೆದ್ದು, ತೃತೀಯ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net