ಸರ್ಕಾರಿ ಕೆಲಸ ಜವಾಬ್ದಾರಿಯಿಂದ ನಿರ್ವಹಿಸಿ

ದೇವದುರ್ಗದ ಜೆಕೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಉದ್ಘಾಟಿಸಿದರು. ತಾಪಂ ಇಒ ಬಸವರಾಜ ಹಟ್ಟಿ, ಜಿಪಂ ಎಇಇ ಅಲ್ಲಾಭಕ್ಷಿ, ಶಿವಾಜಿ ನಿಡಗುಂದಿ, ಬಸವರಾಜ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ಹನುಮಂತ್ರಾಯ ಶಾಖೆ ಇತರರಿದ್ದರು.
ದೇವದುರ್ಗದ ಜೆಕೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಉದ್ಘಾಟಿಸಿದರು. ತಾಪಂ ಇಒ ಬಸವರಾಜ ಹಟ್ಟಿ, ಜಿಪಂ ಎಇಇ ಅಲ್ಲಾಭಕ್ಷಿ, ಶಿವಾಜಿ ನಿಡಗುಂದಿ, ಬಸವರಾಜ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ಹನುಮಂತ್ರಾಯ ಶಾಖೆ ಇತರರಿದ್ದರು.
Published on

ದೇವದುರ್ಗ: ನೌಕರರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಹೇಳಿದರು.

ಪಟ್ಟಣದ ಜೆಕೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ನೌಕರರು ಜನರ ಸೇವಕರು ಎನ್ನುವ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.

ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಮಾತನಾಡಿ, ರಾಜ್ಯದ ಐದು ಕೋಟಿ ಜನಸಂಖ್ಯೆಯಲ್ಲಿ 5 ಲಕ್ಷ ಜನರಿಗೆ ಮಾತ್ರ ಸರ್ಕಾರಿ ಕೆಲಸ ಮಾಡುವ ಅದೃಷ್ಟ ಒಲಿಯಲಿದೆ. ನೌಕರರು ಜನಸೇವೆಗೆ ಜೀವನ ಮುಡಿಪಾಗಿಡಬೇಕು. ಸರ್ಕಾರಿ ನೌಕರರ ಸಂಘ ಹೋರಾಟದ ಮೂಲಕ ನ್ಯಾಯ ಒದಗಿಸಲು ಶ್ರಮಿಸುತ್ತಿದೆ. ನೌಕರರ ಭವನ ನಿರ್ಮಾಣಕ್ಕೆ 1ಎಕರೆ ಜಮೀನು ಮಂಜೂರಾಗಿದೆ. ಆದರೆ, ಭವನ ನಿರ್ಮಾಣಕ್ಕೆ ಅನುದಾನದ ಕೊರತೆಯಿದ್ದು, ಸರ್ಕಾರ ಅನುದಾನ ನೀಡುವಂತೆ ಒತ್ತಾಯಿಸಿದರು.

ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಜಿಪಂ ಎಇಇ ಅಲ್ಲಾಭಕ್ಷಿ, ಲೋಕೋಪಯೋಗಿ ಇಲಾಖೆ ಎಇಇ ಶಿವಾಜಿ ನಿಡಗುಂದಿ, ಪಶುಸಂಗೋಪನೆ ಇಲಾಖೆ ಎಡಿ ಬಸವರಾಜ ಮಿರಸದಾರ್, ಪಿಐ ಎಸ್.ಮಂಜುನಾಥ, ಸಿಪಿಐ ಗುಂಡುರಾವ್, ಪ್ರಮುಖರಾದ ತಿರುಪತಿ ಸೂಗೂರು, ವೀರುಪನಗೌಡ, ಮಹಾದೇವ ಪಾಟೀಲ್, ಅಣ್ಣರಾವ್, ಭೀಮನಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net