

ಕಾರವಾರ: ಕಪ್ಪ ಬಂಗಾರ ಎಂದೇ ಕರೆಯುವ ಕಾಳು ಮೆಣಸಿಗೆ ಮತ್ತೆ ಬಂಗಾರದ ಬೆಲೆ ಬರಲಾರಂಭಿಸಿದೆ. ಏಳು ವರ್ಷಗಳ ನಂತರ ಮೊದಲ ಬಾರಿಗೆ ಕಾಳು ಮೆಣಸಿನ ಬೆಲೆ ಕ್ವಿಂಟಾಲ್‌ಗೆ 60 ಸಾವಿರ ರೂ. ದಾಟಿದೆ.
ಶಿರಸಿ ಟಿಎಸ್‌ಎಸ್ ಮಾರುಕಟ್ಟೆಯಲ್ಲಿ ಶುಕ್ರವಾರ ಕ್ವಿಂಟಾಲ್‌ಗೆ ಗರಿಷ್ಠ 51,189 ರೂ.ಗೆ ಮಾರಾಟವಾಗಿತ್ತು. ಶನಿವಾರ ಏಕಾಏಕಿ 5 ಸಾವಿರ ಏರಿ ಕ್ವಿಂಟಾಲ್‌ಗೆ 56 ಸಾವಿರ ರೂ.ಗೆ ಮಾರಾಟವಾಗಿತ್ತು. ಸೋಮವಾರ ಮತ್ತೆ ಬೆಲೆ ತೇಜಿಯಾಗಿದ್ದು, ಗರಿಷ್ಠ ಮಾರಾಟ ಬೆಲೆ 61,699 ರೂ.ಗೆ ತಲುಪಿದೆ.
ಇದು ಇತ್ತೀಚಿನ ವರ್ಷಗಳ ದಾಖಲೆ ಬೆಲೆಯಾಗಿದೆ. 2017 ರಲ್ಲಿ ಕಾಳು ಮೆಣಸಿನ ಬೆಲೆ 60 ಸಾವಿಕ್ಕಿಂತ ಹೆಚ್ಚಿತ್ತು. ಅಂದು ಇಳಿಕೆ ಕಂಡಿದ್ದು, ಮತ್ತೆ ಏರಿರಲಿಲ್ಲ.ವಿಯೆಟ್ನಾಂ ಮುಂತಾದ ಮೆಣಸಿಕ ಕಾಳು ಬೆಳೆಯುವ ದೇಶದಲ್ಲಿ ಉತ್ಪಾದನೆ ಕಡಿಮೆ ಇದೆ. ಇಲ್ಲಿ ಬೆಳೆಯುವ ಕಾಳು ಮೆಣಸಿಗೆ ಸ್ಥಳೀಯವಾಗಿಯೇ ಬೇಡಿಕೆ ಇದೆ.
ಇದನ್ನೂ ಓದಿ:ಜಲಪಾತ ವೀಕ್ಷಣೆಗೆ ನಿಷೇಧ
ಇತ್ತೀಚೆಗೆ ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಕಾಳು ಮೆಣಸಿನ ಪ್ರಮಾಣ ಕಡಿಮೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಹಾಗಾಗಿ ಕಾಳು ಮೆಣಸಿಗೆ ಮತ್ತೆ ಬೇಡಿಕೆ ಬಂದಿದೆ' ಎನ್ನುತ್ತಾರೆ ಟಿಎಸ್‌ಎಸ್ ಸಂಸ್ಥೆಯ ಮುಖ್ಯಸ್ಥ ರವೀಶ ಹೆಗಡೆ.
ಕಾಳು ಮೆಣಸಿಗೆ ಹೆಚ್ಚು ಬೇಡಿಕೆ ಇದೆ. ಸದ್ಯದಲ್ಲೇ ಪ್ರತಿ ಕ್ವಿಂಟಾಲ್‌ಗೆ 70 ಸಾವಿರದವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರುತ್ತಿರುವುದರಿಂದ ರೈತರು ಮಾರುಕಟ್ಟೆಗೆ ಕಾಳು ಮೆಣಸು ತರುತ್ತಿಲ್ಲ.
ಪ್ರತಿ ದಿನ ಸುಮಾರು 50 ಲಾಟ್‌ಗಳಷ್ಟು ಮಾತ್ರ ಎಂದರೆ 50 ರಿಂದ 75 ಕ್ವಿಂಟಾಲ್ ಮಾತ್ರ ಮಾರುಕಟ್ಟೆಗೆ ಆವಕವಾಗುತ್ತಿದೆ' ಎನ್ನುತ್ತಾರೆ ರವೀಶ ಹೆಗಡೆ.
ಉತ್ತರ ಕನ್ನಡದಲ್ಲಿ ಕಾಳು ಮೆಣಸಿನ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2016 ರ ಹೊತ್ತಿಗೆ ಜಿಲ್ಲೆಯಲ್ಲಿ ಕಾಳು ಮೆಣಸಿನ ಉತ್ಪಾದನೆ ವಾರ್ಷಿಕ 734 ಟನ್ ಇತ್ತು.
2018 ರ ಹೊತ್ತಿಗೆ ಅದು ಏರಿಕೆಯಾಗಿ 17,492 ಟನ್ ತಲುಪಿತ್ತು. 2020 ರಲ್ಲಿ ಜಿಲ್ಲೆಯಲ್ಲಿ 35,454 ಟನ್ ಕಾಳು ಮೆಣಸು ಉತ್ಪಾದನೆಯಾಗಿದೆ. ಈ ಎರಡು ವರ್ಷಗಳಲ್ಲಿ ಕಾಳು ಮೆಣಸಿನ ಉತ್ಪಾದನೆ 50 ಸಾವಿರ ಟನ್‌ಗೂ ಹೆಚ್ಚಾಗಿದೆ.