ಕಲ್ಲು, ದೊಣ್ಣಿಯಿಂದ ನರಿ ಕೊಂದ ಜನರು

NARI
Published on

ನರಗುಂದ: ನಗರದ ವಿವಿಧ ಬಡಾವಣೆಯ ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದ ನರಿಯೊಂದನ್ನು ಸಾರ್ವಜನಿಕರು ಕಲ್ಲು ಹಾಗೂ ದೊಣ್ಣಿಗಳಿಂದ ಬೀದಿಯಲ್ಲಿ ಹೊಡೆದು ಕೊಂದು ಹಾಕಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.


ನಿರ್ಜನ ಪ್ರದೇಶದಲ್ಲಿರಬೇಕಾದ ನರಿ ಜ. 3ರಂದು ರಾತ್ರಿ 10 ಗಂಟೆ ಸುಮಾರಿಗೆ ಆಹಾರವನ್ನು ಅರಸಿ ನರಗುಂದಕ್ಕೆ ಆಗಮಿಸಿತ್ತು. ರಾತ್ರಿ ಊಟ ಮಾಡಿ ಮನೆಯ ಮಾಳಗಿಯ ಮೇಲೆ ಮಲಗಿದ್ದ ಕಸಬಾ, ಅರ್ಭಾಣ, ಸುಣ್ಣದಗಸಿ ಬಡಾವಣೆಯ ನಾರಾಯಣ ಪುಂಡಲೀಕಪ್ಪ ಯಾಧವ, ಪ್ರವೀಣ ಶಿವಲಿಂಗಪ್ಪ ಗುದಗಿ, ಭವಾನಿ ಈರಣ್ಣ ವಡ್ಡಿಗೇರಿ, ಸಂಗಪ್ಪ ಶಿವಪ್ಪ ಗುದಗಿ ಎಂಬುವರ ತಲೆ, ಕುತ್ತಿಗೆ, ಕೈಕಾಲು, ದೇಹದ ವಿವಿಧ ಭಾಗಗಳಿಗೆ ನರಿ ಕಚ್ಚಿದ್ದರಿಂದ ನಾಲ್ವರು ಗಂಭೀರ ಗಾಯಗೊಂಡಿದ್ದರು.

ಇದರಿಂದ ಸಿಟ್ಟಿಗೆದ್ದ ಜನರು ನರಿಯನ್ನು ಕೋಲಿನಿಂದ ಹೊಡೆದು ಕೊಂದು ಹಾಕಿದ್ದಾರೆ. ನರಗುಂದದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರಿಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಎಲ್ಲರೂ ಮನೆಗೆ ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net