

ಬೆಳಗಾವಿ: ಕರೊನಾ ಸಂಕಷ್ಟ ಸಮಯದಲ್ಲಿ ಊರು ಬಿಟ್ಟಿದ್ದ ಶಾಸಕರೊಬ್ಬರು ಬರೋಬ್ಬರಿ ಎರಡು ವರ್ಷಗಳ ಬಳಿಕ ತಮ್ಮ ಕ್ಷೇತ್ರಕ್ಕೆ ಮರಳಿದ್ದು, ಜನರು ಅವರನ್ನು ಭರ್ಜರಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ.
ಕಿತ್ತೂರಿನ ಮಾಜಿ ಶಾಸಕ ಡಿ.ಬಿ. ಇನಾಮದಾರ್ ಇಂಥದ್ದೊಂದು ಸ್ವಾಗತದ ಮೂಲಕ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ಇವರಿಗೆ ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ಪರಿಣಾಮವಾಗಿ ಕಿತ್ತೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕಂಡುಬಂತು.
ಇವರು ಎರಡು ವರ್ಷಗಳ ಹಿಂದೆ ಕರೊನಾ ಸಂಕಷ್ಟ ಸಮಯದಲ್ಲಿ ಕ್ಷೇತ್ರವನ್ನು ತೊರೆದು ಬೆಂಗಳೂರನ್ನು ಸೇರಿಕೊಂಡಿದ್ದರು. ಅದಾದ ಬಳಿಕ ಒಮ್ಮೆಯೂ ಇತ್ತು ಸುಳಿಯದ ಮಾಜಿ ಶಾಸಕ, ಇದೀಗ ಎರಡು ವರ್ಷಗಳ ಬಳಿಕ ತಮ್ಮ ಕ್ಷೇತ್ರಕ್ಕೆ ವಾಪಸ್ ಬಂದಿದ್ದಾರೆ.