ಯಾರೂ ಬೇಡ ಎಂದೂ ‘ನೋಟಾ’ಕ್ಕೆ ವೋಟು

evm
Published on

ತುಮಕೂರು: ವಿಧಾನಸಭಾ ಚುನಾವಣೆ ಸ್ಪರ್ಧೆಯಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಇರುವ ‘ನೋಟಾ’ಗೆ ಜಿಲ್ಲೆಯಲ್ಲಿ 8402 ಜನರು ಮತ ಚಲಾಯಿಸಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತೀ ಹೆಚ್ಚು 1200 ಚಲಾವಣೆಯಾಗಿದ್ದರೆ ತುರುವೇಕೆರೆ ಕ್ಷೇತ್ರದಲ್ಲಿ ಅತೀ ಕಡಿಮೆ 588ನೋಟಾಗೆ ಚಲಾವಣೆಯಾಗಿದೆ.

ಡಾ.ಜಿ.ಪರಮೇಶ್ವರ್ ಗೆದ್ದಿರುವ ಕೊರಟಗೆರೆಯಲ್ಲಿ 760, ತುಮಕೂರು ನಗರದಲ್ಲಿ 1121, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 778, ತುರುವೇಕೆರೆಯಲ್ಲಿ 588, ತಿಪಟೂರು 635, ಪಾವಗಡದಲ್ಲಿ 614, ಕುಣಿಗಲ್ 630, ಗುಬ್ಬಿ 726 ಹಾಗೂ ಶಿರಾ ಕ್ಷೇತ್ರದಲ್ಲಿ 722 ಜನರು ನೋಟಾ ಬಳಸಿದ್ದಾರೆ.

2018ರ ಚುನಾವಣೆಯಲ್ಲಿ ‘ನೋಟಾ’ಗೆ ಜಿಲ್ಲೆಯಲ್ಲಿ 10191 ಜನರು ಮತ ಚಲಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net