ಜನರಿಗೆ ಸಕಾಲದಲ್ಲಿ ಸೇವೆ ಒದಗಿಸಿ

nkt tahalidl
Published on

ನಾಯಕನಹಟ್ಟಿ: ಸರ್ಕಾರಿ ಸೌಲಭ್ಯಗಳ ಅನುಕೂಲ ಪಡೆಯಲು ಸಾರ್ವಜನಿಕರು ನಾಡಕಚೇರಿ, ಪಪಂ, ಗ್ರಾಮ ಒನ್ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದು ತಹಸೀಲ್ದಾರ್ ರೆಹಾನ್ ಪಾಷಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ನಾಡಕಚೇರಿ ಸೇರಿ ಪಪಂ, ಮಲ್ಲೂರಹಳ್ಳಿ ಗ್ರಾಮ ಒನ್ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ ಅರ್ಜಿ ಸಲ್ಲಿಕೆಗಳ ಬಗ್ಗೆ ಇರುವ ಸಮಸ್ಯೆ ಪರಿಶೀಲಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ, ವಿಳಂಬ ನೀತಿಯನ್ನು ಅನುಸರಿಸದೆ ಮತ್ತು ಇಲ್ಲಸಲ್ಲದ ನೆಪ ಹೇಳಿ ಕಚೇರಿಗೆ ಅಲೆದಾಟ ಮಾಡದಂತೆ ಸಕಾಲದಲ್ಲಿ ಸೇವೆ ನೀಡಬೇಕು ಎಂದು ತಾಕೀತು ಮಾಡಿದರು.

ನಂತರ ಮಲ್ಲೂರಹಳ್ಳಿ ಗ್ರಾಮ ಒನ್ ಕೇಂದ್ರಕ್ಕೆ ಭೇಟಿನೀಡಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನಿಯಮಿತವಾಗಿ ಅರ್ಜಿಗಳನ್ನು ಸ್ವೀಕರಿಸಬೇಕು. ಜನರನ್ನು ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಬಾರದು. ಸರ್ವರ್ ಸಮಸ್ಯೆಯಾದರೆ ಗ್ರಾಮ ಒನ್ ಸಿಬ್ಬಂದಿಗೆ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಉಪ ತಹಸೀಲ್ದಾರ್ ಶಕುಂತಲಾ, ಕಂದಾಯ ನಿರೀಕ್ಷಕ ಆರ್.ಚೇತನ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಟಿ.ಜಗದೀಶ್, ಹರೀಶ್, ಶರಣಬಸವ, ಜೈರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net