ಜನರು ಸುರತ ಸ್ಥಳಕ್ಕೆ ತೆರಳಬೇಕು

19mkh1(A)
Published on

ಎಂ.ಕೆ. ಹುಬ್ಬಳ್ಳಿ: ಧಾರಾಕಾರ ಮಳೆಗೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಿಗೆ ಸುರತ ಸ್ಥಳಗಳಿಗೆ ತೆರಳುವಂತೆ ಮಂಗಳವಾರ ನದಿ ತೀರಕ್ಕೆ ಭೇಟಿನೀಡಿ ಹರಿವಿನ ಪ್ರಮಾಣ ವೀಸಿದ ಚನ್ನಮ್ಮನ ಕಿತ್ತೂರು ತಾಲೂಕಿನ ತಹಸೀಲ್ದಾರ್​ ಕಲಗೌಡ ಪಾಟೀಲ, ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಗ್ರಾಮಾಡಳಿತಾಧಿಕಾರಿ ಬಸವರಾಜ ಕೊಂಡಿಕೊಪ್ಪ ಮನವಿ ಮಾಡಿದರು.

ವಿಠ್ಠಲ&ರುಕ್ಮಿಣಿ ಮಂದಿರ, ಶರಣೆ ಗಂಗಾಂಬಿಕೆ ಐಕ್ಯಮಂಟಪ, ಅಶ್ವತ್ಥ ಲಕ್ಷಿ$್ಮ ನರಸಿಂಹ ದೇವಸ್ಥಾನ ಬಳಿ ನದಿ ಹರಿವು ಪರಿಶೀಲಿಸಿದರು. ನೀರಿನ ಮಟ್ಟ ಹೆಚ್ಚುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ತಣವೇ ಸುರತ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು. ನಂತರ ವೀರಾಪುರ, ಅಮರಾಪುರ ಮತ್ತು ಎಂ.ಕೆ.ಹುಬ್ಬಳ್ಳಿ&ಅಮರಾಪುರ ಹಳ್ಳ ದ ಹರಿವು ಪರಿಶೀಲಿಸಿದರು. ಕಂದಾಯ ನಿರೀಕ ಎಂ.ಎಂ. ನೀರಲಗಿ, ರವಿ ಯಲ್ಲಗೌಡ್ರ, ಪಪಂ ಆರೋಗ್ಯ ನಿರೀಕಿ ಕವಿತಾ ನಾಗನೂರ, ಮಲ್ಲಿಕಾರ್ಜುನ ತಿಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net