ಸೋಂಕಿತನ ಅಂತ್ಯಕ್ರಿಯೆಗೆ ವಿರೋಧ

carona logo
Published on

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ತಾಲೂಕಿನ ಅರಬಗೊಂಡ ಗ್ರಾಮದ ಬಳಿ ಗುರುತಿಸಿದ್ದ ಕೋವಿಡ್ ಸ್ಮಶಾನದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮೃತನ ಹುಟ್ಟೂರಿನಲ್ಲಿ ಮಣ್ಣು ಮಾಡಿದ ಘಟನೆ ಮಂಗಳವಾರ ನಡೆದಿದೆ.

ಅರಬಗೊಂಡ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ತಾಲೂಕಾಡಳಿತ ಕರೊನಾದಿಂದ ಮೃತಪಟ್ಟವರನ್ನು ಸರ್ಕಾರದ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿತ್ತು. ಕಳೆದ ವಾರದಿಂದ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಬಿಸಲಹಳ್ಳಿ ಗ್ರಾಮದ 38 ವರ್ಷದ ಪುರುಷ ಮಂಗಳವಾರ ಮೃತಪಟ್ಟಿದ್ದು, ಈತನ ಶವವನ್ನು ಅರಬಗೊಂಡ ಗ್ರಾಮಕ್ಕೆ ತರುವ ಸುದ್ದಿ ಹರಡುತ್ತಿದ್ದಂತೆ, ಗುಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇನಹಳ್ಳಿ, ಶಿವಪುರ, ಅರಬಗೊಂಡ ಗ್ರಾಮಸ್ಥರು ನಮ್ಮ ಗ್ರಾಮದ ಬಳಿ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ್ ನೇತೃತ್ವದಲ್ಲಿ ಮೃತನ ಹುಟ್ಟೂರಿನಲ್ಲಿ ಶವಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net