ಜನ ಸಂಖ್ಯೆಗೆ ಅನುಗುಣವಾಗಿ ಸ್ಮಶಾನ ನಿರ್ಮಿಸಿ

3 HATTI 1
ರುದ್ರಭೂಮಿಗಾಗಿ ಹಟ್ಟಿಚಿನ್ನದಗಣಿ ಕಂಪನಿ ಕೊಟ್ಟಿರುವ ಬೈ-ಪಾಸ್ ರಸ್ತೆಯಲ್ಲಿರುವ ಎರಡು ಎಕರೆ ಭೂಮಿ.
Published on

ಹಟ್ಟಿಚಿನ್ನದಗಣಿ: ಪಪಂ ವ್ಯಾಪ್ತಿಯಲ್ಲಿ ರುದ್ರಭೂಮಿ ಇಲ್ಲದಿರುವುದರಿಂದ ಹಳ್ಳದ ದಂಡೆಯಲ್ಲಿ ಹೆಣ ಉಳುವಂತಾಗಿದೆ.

ಅಧಿಸೂಚಿತ ಪ್ರದೇಶ ಹಾಗೂ ಪ.ಪಂ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಪ್ರದೇಶ ಸಮಿತಿ ವ್ಯಾಪ್ತಿಗೆ ಲಿಂಗಸುಗೂರು ಮಾರ್ಗದಲ್ಲಿ ಗುಡದನಾಳ ಕ್ರಾಸ್ ಬಳಿ ಒಂದು ರುದ್ರಭೂಮಿ ಇದ್ದು, ಇಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶವಿಲ್ಲ.

ನಗರದ ಜನಸಂಖ್ಯೆ ಜಿಲ್ಲೆಗೆ 4ನೇ ಸ್ಥಾನದಲ್ಲಿದೆ. ರುದ್ರಭೂಮಿ ಮಂಜೂರಾತಿಗೆ ಒತ್ತಾಯಿಸಿ ಹಲವು ಬಾರಿ ಪಕ್ಷಾತೀತವಾಗಿ ನಾನಾ ಸಂಘಟನೆಗಳು ಜಂಟಿಯಾಗಿ ಜನ ಪ್ರತಿನಿಧಿಗಳಿಗೆ ಹಾಗೂ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ನಂತರ ಜಿಲ್ಲಾಧಿಕಾರಿ, ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪವಿಭಾಗಾಧಿಕಾರಿ, ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ, ಎ.ಕೆ ಮೊನ್ನಪ್ಪ ವ್ಯವಸ್ಥಾಪಕರಾಗಿದ್ದಾಗ ಹಟ್ಟಿಚಿನ್ನದಗಣಿ ಕಂಪನಿಗೆ ಸ್ಥಳ ನೀಡುವಂತೆ ಕೋರಲಾಗಿತ್ತು. ಈ ಹಿನ್ನೆಲೆ ಪಟ್ಟಣ ಸಂಪರ್ಕಿಸುವ ಬೈಪಾಸ್ ರಸ್ತೆಯಲ್ಲಿರುವ ಎರಡು ಎಕರೆ ಸ್ಥಳ ಪರಿಶೀಲಿಸಿ ಒಪ್ಪಿಗೆ ಸೂಚಿಸಿ ವರ್ಷಗಳೆ ಕಳೆದರೂ ಮಂಜೂರಾತಿ ಬಗ್ಗೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಜಿಲ್ಲಾಧಿಕಾರಿಗಳು ರುದ್ರಭೂಮಿ ವಿಚಾರ ಗಂಭೀರವಾಗಿ ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 10ಎಕರೆಯಾದರು ಸ್ಥಳಾವಕಾಶ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಪ್ರಸ್ತಾವನೆ ಸಲ್ಲಿಸಿರುವ ಎರಡು ಎಕರೆ ಸ್ಥಳ ಸಾಕಾಗುವುದಿಲ್ಲ. ಪಾಮನಕಲ್ಲೂರು ರಸ್ತೆ ವಿಶಾಲವಾದ ಪ್ರದೇಶವನ್ನು ಗುರುತಿಸಿ ಸ್ಮಶಾನ ಜಾಗ ಒದಗಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಟ್ಟಿ ರುದ್ರಭೂಮಿಗೆ ಗಣಿ ಕಂಪನಿ ನೇತೃತ್ವದಲ್ಲಿ ಸ್ಥಳ ಗುರುತುಮಾಡಿ ಪರಿಶೀಲನೆ ನಡೆಸಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಕಡತ ಹಾಗೂ ಈ ಹಿಂದೆ ರುದ್ರಭೂಮಿಗೋಸ್ಕರ ನಡೆದ ಚರ್ಚೆ ತಿಳಿದುಕೊಂಡು ಯಾವ ಹಂತದಲ್ಲಿಯೇ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.ಜಗನ್ನಾಥ ಕುಲಕರ್ಣಿಹಟ್ಟಿ ಪ.ಪಂ ಮುಖ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net