ರಾಜ್ಯದಲ್ಲಿ ಮತ್ತೆ ಕೇಸರಿ ಹವಾ!; ಈಗ ಶಾಲು ತೊಡಲು ಕಾರಣ ಅದಲ್ಲ..

Saffron
Published on

ಧಾರವಾಡ: ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಕೇಸರಿ ಹವಾ ಕಾಣಿಸಿಕೊಂಡಿತ್ತು. ಆದರೆ ಆಗ ತಲೆ ಎತ್ತಿದ್ದ ಹಿಜಾಬ್ ವಿವಾದಕ್ಕೆ ಪತ್ರಿಯಾಗಿ ಕೇಸರಿ ಶಾಲುಳು ಕಾಣಿಸಿಕೊಂಡಿದ್ದವು. ಆದರೆ ಈಗ ಮತ್ತೆ ಕೇಸರಿ ಹವಾ ಕಾಣಿಸಿಕೊಳ್ಳಲು ಕಾರಣ ಅದಲ್ಲ. ಅದಾಗ್ಯೂ ಕೇಸರಿ ಹವಾ ಕಂಡುಬಂದಿದ್ದು, ಇದು ಮತ್ತಷ್ಟು ವ್ಯಾಪಿಸಿದರೂ ಅಚ್ಚರಿ ಏನಿಲ್ಲ.

ಹೌದು.. ಈಗ ಮತ್ತೆ ಕೇಸರಿ ಶಾಲುಗಳು ರಾರಾಜಿಸಿದ್ದು ಯಾವುದೇ ಶಾಲೆ ಅಥವಾ ಕಾಲೇಜಿನ ಆವರಣದಲ್ಲಲ್ಲ, ಬದಲಿಗೆ ಚಿತ್ರಮಂದಿರದಲ್ಲಿ. ಇತ್ತೀಚೆಗೆ ಬಿಡುಗಡೆ ಆಗ ದಿ ಕಶ್ಮೀರ್ ಫೈಲ್ಸ್​ ಚಿತ್ರವನ್ನು ವೀಕ್ಷಣೆ ವೇಳೆ ಇಂಥದ್ದೊಂದು ದೃಶ್ಯ ಕಂಡುಬಂದಿದೆ.

ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ಇಂದು ದಿ ಕಶ್ಮೀರ್ ಫೈಲ್ಸ್ ನೋಡಲು ಬಂದವರು ಕೇಸರಿ ಶಾಲುಗಳನ್ನು ಧರಿಸಿಕೊಂಡು ಬಂದಿದ್ದಾರೆ. ಯುವಕರು ಪುರುಷರು ಮಾತ್ರವಲ್ಲದೆ, ಮಹಿಳೆಯರು ಕೂಡ ಕೇಸರಿ ಶಾಲು ಹಾಕಿಕೊಂಡು ಬಂದಿರುವುದು ವಿಶೇಷವಾಗಿತ್ತು. ಇನ್ನು ಬೇರೆ ಚಿತ್ರಮಂದಿರಗಳಿಗೂ ಈ ಟ್ರೆಂಡ್​ ದೊಡ್ಡಮಟ್ಟದಲ್ಲಿ ವ್ಯಾಪಿಸಿದರೂ ಅಚ್ಚರಿ ಏನಿಲ್ಲ ಎಂಬಂಥ ಲಕ್ಷಣಗಳು ಗೋಚರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net