

ಕೋಟ: ನಮ್ಮ ಊರು, ನಮ್ಮ ಶಾಲೆ, ನಮ್ಮ ಆರೋಗ್ಯ ಕೇಂದ್ರ ಮತ್ತು ನಮ್ಮ ಸಹಕಾರಿ ಸಂ ಒಂದಾಗಿ ರೋಟರಿಯಂತ ಸಂಸ್ಥೆ ಸಹಕಾರದಿಂದ ಸೇವೆ ನೀಡಿದಲ್ಲಿ ಜನರಿಗೆ ಸಹಕಾರ ಆಗುತ್ತದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಹೇಳಿದರು.
ಕೋಟ ಸಹಕಾರಿ ವ್ಯವಸಾಯಕ ಸಂ ಮತ್ತು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಜಂಟಿಯಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಟ ಸಹಕಾರಿ ವ್ಯವಸಾಯಕ ಸಂ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಾಧವ ಪೈ ಅವರಿಗೆ ಇಸಿಜಿ ಯಂತ್ರ ಹಸ್ತಾಂತರಿಸಿದರು.
ಸಹಕಾರಿ ಸಂ ಉಪಾಧ್ಯಕ್ಷ ನಾಗರಾಜ್ ಹಂದೆ, ಸಿಇಒ ಶರತ್ ಕುವಾರ್ ಶೆಟ್ಟಿ, ವೈದ್ಯ ಡಾ.ವಿಶ್ವನಾಥ್, ಸದಸ್ಯ ಅಚ್ಚುತ ಪೂಜಾರಿ, ಕುಸುಮಾ, ಬಸವ ಪೂಜಾರಿ, ರಾಜೇಶ್ ಉಪಸ್ಥಿತರಿದ್ದರು. ಕ್ಲಬ್‌ನ ವಾಜಿ ಅಧ್ಯಕ್ಷ ದೇವಪ್ಪ ಪಟಗಾರ ಕಾರ್ಯಕ್ರಮ ನಿರೂಪಿದರು.