

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025’ರ ಕಾರ್ಯಕ್ರಮದಡಿ ಸತತ 107ನೇ ತಿಂಗಳ ಕಾರ್ಯಕ್ರಮ ಭಾನುವಾರ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು.
ಗೊಂಬೆಯಾಟ ಪ್ರೋತ್ಸಾಹಕ ರಾಧಾಕೃಷ್ಣ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಯಕ್ಷಗಾನ ಕೇಂದ್ರದ ಗುರು, ಉಪ್ಪಿನಕುದ್ರು ಗೊಂಬೆಯಾಟ ಮಂಡಳಿ ಭಾಗವತ ಉಮೇಶ್ ಸುವರ್ಣ, ರಮೇಶ್ ಕಾಮತ್, ವಿ.ಶ್ರೀನಿವಾಸ ಪೈ ಮತ್ತು ಆಡಿಟರ್ ವಾಸುದೇವ ಶ್ಯಾನುಭಾಗ್ ಶುಭ ಹಾರೈಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ, ಕಲಾವಿದೆ ಆಕಾಂಕ್ಷಾ ಎಸ್.ಪೈ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ವಸಂತಿ ಆರ್. ಪಂಡಿತ್ ಮತ್ತು ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ರಾಜೇಂದ್ರ ಪೈ ನಿರೂಪಿಸಿದರು.