ಡಿಸೆಂಬರ್ 31ರ ವರೆಗೆ ಪೆಂಟಾವಲೆಂಟ್ ಲಸಿಕಾ ಅಭಿಯಾನ  ಒಂದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಡಿ.ಎಚ್.ಓ ಮನವಿ

Published on

ಯಾದಗಿರಿ,:  ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ ಯಾದಗಿರಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 31ರ ವರೆಗೆ ಪೆಂಟಾವಲೆಂಟ್ ಲಸಿಕಾ ಅಭಿಯಾನ ಚಾಲ್ತಿಯಲ್ಲಿದ್ದು, ಮಗುವಿನ ಆರೋಗ್ಯಕರ ಮತ್ತು ಸಮಗ್ರ ಬೆಳವಣಿಗೆಗೆ ಈ ರೋಗ ನಿರೋಧಕ ಲಸಿಕೆ ಹಾಕಿಸುವುದು ಅತ್ಯವಶ್ಯಕವಾಗಿದ್ದು. ಲಸಿಕೆ ವಂಚಿಕ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ ಅವರು ಮನವಿ ಮಾಡಿದ್ದಾರೆ.

ವಿಶೇಷ ಲಸಿಕಾ ಅಭಿಯಾನದಡಿಯಲ್ಲಿ ಪೆಂಟಾ-1 ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಕಾರಣ ಪಾಲಕ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೆಂಟಾ-1 ಲಸಿಕೆ ಹಾಕಿಸಿಕೊಳ್ಳಬೇಕು. ಪೆಂಟಾವಲೆಂಟ್ ಲಸಿಕೆಯು ಐದು ಮಾರಣಾಂತಿಕ ಖಾಯಿಲೆಗಳಾದ ಡಿಫ್ತಿರಿಯಾ, ಪೆರ್ಟುಸಿಸ್, ಟೆಟನಸ್, ಹೆಪಟೈಟಿಸ್ ಬಿ., ಹಿಬ್ (ಹಿಮೋಫಿಲಸ್ ಇನ್ಫ್ಲ್ಯೂಯೆಂಜಾ ಟೈಪ್ ಬಿ) ಯಿಂದ ಮಗುವಿಗೆ ರಕ್ಷಿಸುತ್ತದೆ. ಮಗುವಿಗೆ ಪೆಂಟಾವಲೆಂಟ್ ಲಸಿಕೆಯನ್ನು ಸಮಯಕ್ಕೆ ಸರಿಯಾಗಿ ಹಾಕಿಸಬೇಕು. ಬಿಟ್ಟುಹೋದ / ಬಾಕಿ ಉಳಿದ ಲಸಿಕಾ ಡೋಸ್‌ಗಳಿಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪ್ರದೇಶದ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net