

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ೨೦೦೬ಕ್ಕೂ ಮೊದಲಿನ ಶಾಲಾ-ಕಾಲೇಜುಗಳಿಗೆ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ ನೌಕರರಿಗೆ ಪಿಂಚಣಿ ಸೇರಿ ಯಾವುದೇ ಸರ್ಕಾರಿ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ನಿವೃತ್ತ ಮತ್ತು ಸೇವೆಯಲ್ಲಿರುವ ನೌಕರರಿಗೆ ಹಳೆ ಪಿಂಚಣಿ ಸೇರಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಆಗಸ್ಟ್ ೨೯ರಂದು ನೌಕರರ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ೨೦೦೬ರ ಪೂರ್ವದ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ರಾಜ್ಯ ಗೌರವಾಧ್ಯP್ಷÀ ಪಿ.ಎಸ್.ಕೋಟನೂರ್‌ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೯ರಂದು ಮೈಸೂರಿನ ಸುತ್ತೂರು ಮಠದಲ್ಲಿ ಸಮಾವೇಶ ನಡೆಯಲಿದೆ. ಜಿ¯್ಲೆಯಿಂದ ೨೦೦೦ಕ್ಕೂ ಅಧಿಕ ನೌಕರರು ತೆರಳಲಿz್ದÁರೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಕಾಲೇಜು, ಬಿಇಡಿ, ವೃತ್ತಿಪರ ಕೋರ್ಸ್ ಪಿಂಚಣಿ ವಂಚಿತ ಸುಮಾರು ೧೦ ಸಾವಿರಕ್ಕೂ ಅಧಿಕ ನೌಕರರು ಪಾಲ್ಗೊಳ್ಳಲಿz್ದÁರೆ ಎಂದರು.
ಸುಮಾರು ೧೫-೨೦ ವರ್ಷಗಳಿಂದ ವೇತನವಿಲ್ಲದೆ ಸೇವೆ ಸಲ್ಲಿಸಲಾಗುತ್ತಿದೆ. ಈಗಾಗಲೇ ನೂರಾರು ನೌಕರರು ೭-೮ ವರ್ಷ ಸೇವೆ ಸಲ್ಲಿಸಿ ಸೌಲಭ್ಯವಿಲ್ಲದೆ ಹೊರಬಂದಿz್ದÉÃವೆ. ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಅಧ್ಯP್ಷÀ ಮರೆಪ್ಪ ಬಸವಪಟ್ಟಣ, ಬಿ.ಜಿ.ಪಾಟೀಲï, ಚಂದ್ರಶೇಖರ ಗಾರಂಪಳ್ಳಿ, ಲಕ್ಷಿö್ಮÃಕಾಂತ ಇತರರು ಇದ್ದರು.