ಅಂಗಡಿಗಳ ಮಾಲೀಕರಿಗೆ 2,200 ರೂ.ದಂಡ

20hgr4
Published on

ಹಲಗೂರು: ಹಲಗೂರು ಸೇರಿದಂತೆ ದಳವಾಯಿ ಕೋಡಿಹಳ್ಳಿ, ತೊರೆ ಕಾಡನಹಳ್ಳಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿ 18 ಪ್ರಕರಣ ದಾಖಲಿಸಿ 2,200 ರೂ.ದಂಡ ವಿಧಿಸಲಾಯಿತು. ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ತೊಡಗಿದ್ದವರಿಗೆ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಿದರು.


ಜಿಲ್ಲಾ ಸಲಹೆಗಾರ ಎಸ್.ಎನ್.ತಿಮ್ಮರಾಜು, ಸುರಕ್ಷತಾಧಿಕಾರಿ ಆಶಾಲತಾ, ಆರೋಗ್ಯ ನಿರೀಕ್ಷಣಾಧಿಕಾರಿ ನಂದೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net