ನಿಷೇಧಿತ ಪ್ಲಾಸ್ಟಿಕ್​ ಬಳಸಿದವರಿಗೆ ದಂಡ

Ksd_Plastic ban
Published on

ಕಾಸರಗೋಡು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್​ ಉತ್ಪನ್ನಗಳ ಬಳಕೆ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಲಾಗಿದೆ. ಕುಂಬಳೆ ಗ್ರಾಮ ಪಂಚಾಯಿತಿಯ ನಾಂಗಿ ಮತ್ತು ಕೊಪ್ಪಳ ಕರಾವಳಿಯ ಹೋಂಸ್ಟೇಯೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್​ ಉತ್ಪನ್ನಗಳನ್ನು ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದರ ಮಾಲೀಕರಿಗೆ 10 ಸಾವಿರ ರೂ.ದಂಡ ವಿಧಿಸಲಾಗಿದೆ.

ಕರಾವಳಿಯಲ್ಲಿರುವ ವ್ಯಾಪಾರಿ ಸಂಸ್ಥೆ ವಠಾರವನ್ನು ಶುಚಿಯಾಗಿರಿಸಿಕೊಳ್ಳದೆ ಇರುವುದಕ್ಕಾಗಿ ಅಂಗಡಿ ಮಾಲೀಕರಿಗೆ 2 ಸಾವಿರ ರೂ. ದಂಡ ವಿಧಿಸಲಾಯಿತು. ಮದುವೆ ಮತ್ತು ಇತರ ಕಾರ್ಯಕ್ರಮಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಸ್ವಂತ ಜಮೀನಿನಲ್ಲಿ ಅವೈಜ್ಞಾನಿಕವಾಗಿ ಸಂಸ್ಕರಿಸಿದ್ದಕ್ಕಾಗಿ ಖಾಸಗಿ ವ್ಯಕ್ತಿಗೆ 2,500 ರೂ. ದಂಡ ವಿಧಿಸಲಾಯಿತು. ಆ ಪ್ರದೇಶದಲ್ಲಿರುವ ರೆಸಾರ್ಟ್​ಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಕಾಸರಗೋಡು ಕಾರ್ನಿವಲ್​ ನಡೆದ ಸ್ಥಳದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್​ ಉತ್ಪನ್ನ ಮತ್ತು ತ್ಯಾಜ್ಯ ರಾಶಿ ಹಾಕಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ನಗರಸಭೆ ಮೂಲಕ 10 ಸಾವಿರ ರೂ.ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net