

ಉಡುಪಿ: 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಿರುವ ದೃಶ್ಯಗಳ ವಿರುದ್ಧ ಸಿಡಿದೆದ್ದಿರುವ ಬ್ರಾಹ್ಮಣ ಸಮಾಜ, ಅದನ್ನು ಗಟ್ಟಿದನಿಯಲ್ಲೇ ಖಂಡಿಸಿದ್ದು, ಇದೀಗ ಅವರೊಂದಿಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡ ದನಿಗೂಡಿಸಿದ್ದಾರೆ.
'ಪೊಗರು' ಕನ್ನಡ ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯ ಇರುವುದು ತಿಳಿಯಿತು. ಬ್ರಾಹ್ಮಣರೆಲ್ಲ ಒಂದಾಗಿ ಅದನ್ನು ಖಂಡಿಸಿದಾಗ ಅಂಥ ದೃಶ್ಯಗಳನ್ನು ತೆಗೆಯುವ ವಾಗ್ದಾನ ಸಿಕ್ಕಿದೆ. ಯಾರೂ ಇಂಥ ಕೆಲಸಗಳಿಗೆ ಕೈ ಹಾಕಬಾರದು.
ಸಮಾಜದಲ್ಲಿ ಎಲ್ಲರೂ ನೆಮ್ಮದಿಯಾಗಿ ಬದುಕಬೇಕೆಂದರೆ ಯಾರೂ ಯಾವುದೇ ಸಮಾಜ, ಜಾತಿ, ಮತ, ಪಂಗಡವನ್ನು ಅವಹೇಳನ ಮಾಡುವ ಕೆಲಸಕ್ಕೆ ಮುಂದಾಗಬಾರದು. ಇದೇ ಕೊನೆಯದಾಗಬೇಕು, ಯಾವುದೇ ಸಮಾಜದಲ್ಲಿನ ಶಾಂತಿಯನ್ನು ಕೆಡಿಸುವ ಪ್ರಯತ್ನಕ್ಕೆ ಯಾರೂ ಕೈಹಾಕಬಾರದು ಎಂಬುದಾಗಿ ಪೇಜಾವರ ಮಠದ ಶ್ರೀಗಳು ಹೇಳಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ