More

    ಪೊಗರು ಚಿತ್ರದ ವಿರುದ್ಧ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ

    ಬೆಂಗಳೂರು: ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ಪೊಗರು ಚಿತ್ರತಂಡದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅವರು ಕಿಡಿ ಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿಂದೂ ಜನರ ಭಾವನೆಗಳ ಮೇಲೆ, ಹಿಂದೂ ಧರ್ಮದ ಮೇಲೆ ಈ ರೀತಿ ಅವಹೇಳನ ಮಾಡುವುದು ಕೆಲವರಿಗೆ ಪ್ಯಾಶನ್ ಆಗಿ ಬಿಟ್ಟಿದೆ ಎಂದು ಹೇಳಿದ್ದಾರೆ.

    ಈ ರೀತಿ ಬೇರೆ ಧರ್ಮದವರ ಮೇಲೆ ಮಾಡಲು ನಿಮಗೆ ಎದೆಗಾರಿಕೆ ಇದೆಯೇ ಎಂದು ಪ್ರಶ್ನಿಸಿರುವ ಅವರು ಕೂಡಲೇ ಪೊಗರು ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.ಶೋಭಾ ಅವರ ಈ ಟ್ವೀಟ್​ಗೆ ಸಾಕಷ್ಟು ಪರ ವಿರೋಧ ವ್ಯಕ್ತವಾಗಿದೆ.ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದ ನೀವು ಬ್ಯಾಹ್ಮಣರಿಗೆ ಅವಮಾನ ಆಗಿದ ತಕ್ಷಣ ಮಾತನಾಡಲು ಬಂದಿರಾ? ಹಿಂದೂ ಅಂದರೆ ಕೇವಲ ಬ್ರಾಹ್ಮಣರಾ ಎಂದು ಪ್ರಶ್ನಿಸಿದ್ದಾರೆ.

    ಶರತ್ ಬಿರೇಂಬಳ್ಳಿ ಎನ್ನುವರು, ”ತಾಯಿ… ಶೃಂಗೇರಿ ಅತ್ಯಾಚಾರ, ಪೆಟ್ರೋಲ್ ಏರಿಕೆ, ರೈತರ ಪ್ರತಿಭಟನೆ, ಅಗತ್ಯವಸ್ತುಗಳಿಂದ ಜನರ ಸಮಸ್ಯೆ ಬಗ್ಗೆ ಇವತ್ತಿನ ತನಕ ಒಂದ್ ಮಾತಿಲ್ಲ ತಮ್ಮದು, ಧರ್ಮ ಹಿಂದೂ ಅಂತ ಬಂದ್ರೆ ಎಲ್ಲಿದ್ರೂ ಬರ್ತೀರಲಾ… ಸಂಸದರ ಕರ್ತವ್ಯ ಹಾಗೂ ಜನರ ಸೇವೆ ಅಂದ್ರೆ ಈ ತರ ಮಾಡೋದ್ನೇ ಅನ್ನೋದಾ?” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಪೊಗರು ಚಿತ್ರತಂಡ ಘಟನೆ ಬಗ್ಗೆ ಕ್ಷಮೆ ಕೇಳಿದ್ದು, ಕೂಡಲೇ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುತ್ತೇವೆ ಎಂದು ಬ್ರಾಹ್ಮಣ ಮಹಾಸಭಾಕ್ಕೆ ಭರವಸೆ ನೀಡಿದೆ.

    ವಿವಾದದಲ್ಲಿ ನಟ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ: ನಿರ್ದೇಶಕ-ನಿರ್ಮಾಪಕರಿಂದ ಕ್ಷಮೆಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts