ಗೋವರ್ಧನ ಕ್ಷೇತ್ರಕ್ಕೆ ಪೇಜಾವರ, ಶಿರೂರು ಶ್ರೀ ಭೇಟಿ...

Pejavara 1
Published on

ಬೆಂಗಳೂರಿನಲ್ಲಿರುವ ಪುತ್ತಿಗೆ ಮಠ

ಶ್ರೀಕೃಷ್ಣನಿಗೆ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀ ಹಾಗೂ ಶಿರೂರು ಮಠದ ವೇದವರ್ಧನ ಶ್ರೀಗಳು ತಮ್ಮ ಚಾತುರ್ಮಾಸ್ಯದ ಅಂಗವಾಗಿ ಜುಲೈ 14ರಂದು ನಡೆದ ಶೋಭಾಯಾತ್ರೆಗೂ ಮೊದಲು ಬೆಂಗಳೂರಿನ ಪುತ್ತಿಗೆ ಮಠಕ್ಕೆ ಭೇಟಿ ನೀಡಿ, ಅಲ್ಲಿನ ಗೋವರ್ಧನಧಾರಿ ಶ್ರೀಕೃಷ್ಣ ದೇವರ ದರ್ಶನ ಪಡೆದರು.

Pejavara 2
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ಅಪೇಕ್ಷೆಯಂತೆ ಶ್ರೀಪಾದದ್ವಯರು ಭೇಟಿ ನೀಡಿದ್ದು, ಶ್ರೀ ಮಠದಿಂದ ವಿಶೇಷ ಗೌರವಾದರಗಳಿಂದ ಸ್ವಾಗತಿಸಲಾಯಿತು. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬೆಂಗಳೂರಿನ ಪುತ್ತಿಗೆ ಮಠದ ವ್ಯವಸ್ಥಾಪಕ ಎ.ಬಿ. ಕುಂಜಾರು ಅವರು ಗೌರವಾರ್ಪಣೆ ಸಲ್ಲಿಸಿದರು.
111
ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ಗೋವರ್ಧನಧಾರಿ ವಿದ್ಯಾಪೀಠದ ಮಕ್ಕಳಿಗೆ ಮತ್ತು ಸೇರಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ಅಪೂರ್ವವಾದ ಗೋವರ್ಧನ ಗುಹಾ ದೇವಾಲಯ ವೀಕ್ಷಿಸಿದ ಭಾವಿ ಪರ್ಯಾಯ ಶಿರೂರು ಮಠದ ವೇದವರ್ಧನ ಶ್ರೀಪಾದರು, ಕೆತ್ತನೆಯಲ್ಲಿರುವ ಶ್ರೀಕೃಷ್ಣನ ಮಹಿಮಾ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೋವರ್ಧನ ಗಿರಿಧಾರಿಯಾದ ಶ್ರೀಕೃಷ್ಣನು ಜಗಕ್ಕೆ ಒಳಿತು ಮಾಡಲಿ. ಅವನ ಆಶೀರ್ವಾದದಿಂದ ಚಾತುರ್ಮಾಸ್ಯ ವೃತ ಸಾಂಗವಾಗಿ ನೆರವೇರಲಿ. ಧರ್ಮ ರಕ್ಷಣೆಯೊಂದಿಗೆ ಭಕ್ತರ ಎಲ್ಲ ಅಭೀಷ್ಟ ನೇರವೇರಲಿ. | ವಿಶ್ವಪ್ರಸನ್ನ ತೀರ್ಥ ಶ್ರೀಪಾದರು. ಪೇಜಾವರ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net