ಸಂಸ್ಕೃತಿ ಉಳಿಸಲು ಪೇಜಾವರ ಮಠ ಕಾರ್ಯೋನ್ಮುಖ

shibira
ಹೆಬ್ರಿಯಲ್ಲಿ ಧಾರ್ಮಿಕ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹಿಂದಿನ ದಿನಗಳಲ್ಲಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕೃತಿಯ ಪಾಠ ದೊರೆಯುತ್ತಿತ್ತು. ತಂತ್ರಜ್ಞಾನದ ಯುಗದಲ್ಲಿ ಈ ಕ್ರಮ ಇಲ್ಲವಾಗುತ್ತಿದೆ. ಪೇಜಾವರ ಮಠದ ನೇತೃತ್ವದಲ್ಲಿ ಸಂಸ್ಕೃತಿ ಉಳಿಸುವ ಕಾರ್ಯ ನಡೆಯುತ್ತಿದ್ದು, ಕಲಿತದ್ದನ್ನು ಮಕ್ಕಳು ನಿತ್ಯವೂ ಅಭ್ಯಸಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದರು.

ಉಡುಪಿ ಪೇಜಾವರ ಮಠ ಮತ್ತು ಶಿಬಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಗಿಲ್ಲಾಳಿಯ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯಲ್ಲಿ ವಿಪ್ರ ಬಾಲಕ, ಬಾಲಕಿಯರಿಗೆ ಆಯೋಜಿಸಿದ್ದ ಹತ್ತು ದಿನಗಳ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವಚನ ನೀಡಿದರು.

ಹೆಬ್ರಿ ಶ್ರೀ ಅನಂತಪದ್ಮನಾಭ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿರ್ದೇಶಕ ಲಕ್ಷ್ಮಣ ಭಟ್ ಶಿವಪುರ, ಡಾ.ಭಾರ್ಗವಿ ಆರ್. ಐತಾಳ್, ಶ್ರೀಧಾಮ ಆಚಾರ್ಯ, ಶ್ರೀವಾಸ ಆಚಾರ್ಯ, ಮಡಾಮಕ್ಕಿ ಅನಂತ ತಂತ್ರಿ, ರಾಮಚಂದ್ರ ಭಟ್ ವರಂಗ, ಎಂ.ರವಿ ರಾವ್, ವಿಷ್ಣುಮೂರ್ತಿ ಆಚಾರ್ಯ, ಚೆನ್ನಕೇಶವ ವೈಲಾಯ, ಹರೀಶ್ ಭಟ್, ವಿದ್ಯಾಲಕ್ಷ್ಮೀ ಆಚಾರ್ಯ, ಚಂದ್ರಿಕಾ ಆಚಾರ್ಯ ಗಿಲ್ಲಾಳಿ, ಶ್ವೇತಾ ತಂತ್ರಿ ಮಾಡಾಮಕ್ಕಿ, ಶ್ರೀನಿಧಿ ಕಲ್ಕೂರ ಹಾಗೂ ಅಮೋಘ ಭಟ್ ಭಕ್ರೆ ಮುದ್ರಾಡಿ ಮತ್ತು ಸುಬ್ರಹ್ಮಣ್ಯ ನಾಯಕ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಸೃಜನ್ ಅಡಿಗ ಮತ್ತು ಐಸಿರಿ ಎಂ. ಅನಿಸಿಕೆ ವ್ಯಕ್ತಪಡಿಸಿದರು. ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net