ಕಾರು ಡಿಕ್ಕಿಯಾಗಿ ಪಾದಚಾರಿಗೆ ಗಾಯ

accident-15
Published on

ಪಡುಬಿದ್ರಿ: ಕಾರು ಡಿಕ್ಕಿಯಾಗಿ ಹಳೆಯಂಗಡಿ ಶಂಶುದ್ದೀನ್(55) ಎಂಬುವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಡಾ ಗ್ರಾಮದ ಪೆಟ್ರೋಲ್ ಬಂಕ್ ಒಂದರ ಬಳಿ ಗುರುವಾರ ನಡೆದಿದೆ. ರಸ್ತೆ ಬದಿ ನಿಂತಿದ್ದ ಶಂಶುದ್ದೀನ್ ಅವರಿಗೆ ಡಿಕ್ಕಿ ಹೊಡೆದ ಕಾರು ಹೆದ್ದಾರಿ ವಿಭಜಕದ ಮೇಲೆ ಹತ್ತಿ ನಿಂತಿತ್ತು. ಗಾಯಾಳು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net