

ಉಡುಪಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ, ಇಂದ್ರಾಳಿ ದುರ್ಗಾಪರಿಮೇಶ್ವರಿ ದೇವಸ್ಥಾನ, ತೆಂಕಪೇಟೆ ಲಲಕ್ಷ್ಮೀವೆಂಕಟೇಶ ದೇವಸ್ಥಾನ, ಕೃಷ್ಣ ಮಠ ಮೊದಲಾದ ಕಡೆಗಳಲ್ಲಿ ನಡೆದ ಸಾಮೂಹಿಕ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಸಾಮೂಹಿಕ ಪ್ರಾರ್ಥನೆ, ಕಳಶ ಪ್ರತಿಷ್ಠೆ, ಸಾಮೂಹಿಕ ಕುಂಕುಮ ಅರ್ಚನೆ, ಲಲಿತಾ ಸಹಸ್ರನಾಮ ಪಠಣ, ಭಜನಾ ಕಾರ್ಯಕ್ರಮ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರಗಿತು. ಒಳಕಾಡು ದೈವಜ್ಞ ಬ್ರಾಹ್ಮಣ ಸಂಘ ಹಾಗೂ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಒಳಕಾಡಿನ ದೈವಜ್ಞ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು. ವೇದಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನಡೆಸಿಕೊಟ್ಟರು. ರಾಜೇಶ್ ಶೇಟ್, ಸುಮನಾ ಶೇಟ್ ಸಹಕರಿಸಿದರು. ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎಸ್. ಸುಬ್ರಮಣ್ಯ ಶೇಟ್, ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಶೇಟ್, ಕಾರ್ಯದರ್ಶಿ ಜಯಶ್ರೀ ಶೇಟ್ , ಮ್ಯಾನೇಜರ್ ವೆಂಕಟೇಶ್ ಶೇಟ್ ಉಪಸ್ಥಿತರಿದ್ದರು. ತೆಂಕಪೇಟೆ ಲಕ್ಷಿ$್ಮವೆಂಕಟೇಶ ದೇವಸ್ಥಾನದ ಭುವನೇಂದ್ರ ಮಂಟಪದಲ್ಲಿ ಜಿಎಸ್ಬಿ ಮಹಿಳಾ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತಪೂಜೆ ನಡೆಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕರಾದ ದಯಘಾನ್ ಭಟ್ ನೆರವೇರಿಸಿದರು.