ಚಿಂತಾಮಣಿ: ಚಿಂತಾಮಣಿ&ಶಿಡ್ಲಘಟ್ಟ ಹೆದ್ದಾರಿಯ ಸೋರಪಲ್ಲಿ ಗೇಟ್ ಬಳಿ ಸೋಮವಾರ ಪಾದಚಾರಿಗೆ ಅಪರಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ತಾಲೂಕಿನ ಕೈವಾರ ಹೋಬಳಿ ಸಂತೇಕಲ್ಲಹಳ್ಳಿಯ ಕೆ.ನರಸಿಂಹಪ್ಪ (35) ಮೃತ. ಅಪಘಾತ ಎಸಗಿರುವ ಅಪರಚಿತ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಾರ್ವಜನಿಕರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕುಟುಂಬಸ್ಥರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಪತ್ನಿಯ ತವರೂರು ಬಿಂಗ್ಯಾನಹಳ್ಳಿಯಿಂದ ಮರಳುವಾಗ ಅಪಘಾತ ಸಂಭವಿಸಿದೆ.