ದೇವರ ಆರಾಧನದೆಯಿಂದ ಸಮಾಜದಲ್ಲಿ ಶಾಂತಿ

byn-2
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಭಗವಂತನ ಆರಾಧನೆ, ನಾಮಸ್ಮರಣೆ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಮನೆ, ಮಠ, ದೇಗುಲ, ಆಚಾರ ವಿಚಾರಗಳು ಇತರ ರಾಷ್ಟ್ರಗಳಲ್ಲಿಲ್ಲ. ಎಲ್ಲೆಡೆ ಧಾರ್ಮಿಕ ಚಟುವಟಿಕೆಗಳಿಗೆ ಶಕ್ತಿ ತುಂಬುವ ವಾತಾವರಣ ನಿರ್ಮಾಣವಾಗಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ಶ್ರೀಗಳು ಹೇಳಿದರು.

ಬಿಜೂರು ಗ್ರಾಮದ ಮಕ್ಕಿ ಶ್ರೀ ಮಹಾಲಿಂಗೇಶ್ವರ ದೇವರ ಶಿಲಾ ದೇಗುಲದ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಕೋಟಿ ಶಿವಪಂಚಾಕ್ಷರಿ ಜಪ ಯಜ್ಞದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಹೊರನಾಡು ದೇವಳದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಶಾಸಕ ಗುರುರಾಜ ಗಂಟಿಹೊಳೆ, ಪ್ರಭಾಕರ ಮಹಾಬಲೇಶ್ವರ್ ರಾವ್ ಬಂಟ್ವಾಳ, ಸುಮಲತಾ ಪ್ರಭಾಕರ್ ರಾವ್, ಕೆ.ಕಿಶೋರ್ ಕುಮಾರ್ ಹೆಗ್ಡೆ ಚಿಕ್ಕಮಗಳೂರು, ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೇಸರ ಗುರುರಾಜ್ ಭಟ್, ಹಟ್ಟಿಯಂಗಡಿ ಬಾಲಚಂದ್ರ ಭಟ್, ಶರತ್ ಮಡಿಮಣ್, ಸತೀಶ್ ಶೆಟ್ಟಿ, ಕೆ.ರವೀಂದ್ರ ಕಿಣಿ, ಪದ್ಮನಾಭ ಮೇರ್ಟ, ಕಳಿ ಚಂದ್ರಯ್ಯ ಆಚಾರ್ಯ ಉಪಸ್ಥಿತರಿದ್ದರು. ನಾಗರಾಜ್ ಭಟ್ ಸ್ವಾಗತಿಸಿದರು. ಜಾಹ್ನವಿ ಭಟ್ ವಂದಿಸಿದರು. ಶ್ರಾವ್ಯಾ ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮೊದಲು ಶ್ರೀಗಳು ಅಷ್ಟೋತ್ತರ ಶತನಾಳಿಕೇರಖಂಡ ಮಹಾಗಣಪತಿ ಯಾಗದ ಪೂರ್ಣಾಹುತಿ, ಅಥರ್ವಶೀರ್ಷ ಹವನ ನೆರವೇರಿಸಿದರು.

ಸಾಧಕ ವಿಪ್ರರಿಗೆ ಗೌರವಾರ್ಪಣೆ

ವಿದ್ವಾನ್ ಗೋಪಾಲಕೃಷ್ಣ ಜೋಶಿ ಉಡುಪಿ, ದೇವಸ್ಥಾನದ ತಾಂತ್ರಿಕ ಕಟ್ಟೆ ಶಂಕರ ಪರಮೇಶ್ವರ ಭಟ್ಟ, ವಿಶ್ವನಾಥ ಭಟ್ಟ, ದಿಲೀಪ ಶ್ರೀಧರ ಭಟ್ಟ ಗೋಕರ್ಣ, ಚಂದ್ರಶೇಖರ ಅಡಿಗ ಮೊಗೇರಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net