

ಕಂಪ್ಲಿ: ಕಲ್ಲು ಮಣ್ಣುಗಳಲ್ಲಿ ದೇವರನ್ನು ಕಾಣುವ ಮನುಷ್ಯ ತನ್ನೊಳಗೆ ಪರಮಾತ್ಮನನ್ನು ಕಾಣದಿರುವುದು ವಿಪರ್ಯಾಸ ಎಂದು ಎಮ್ಮಿಗನೂರಿನ ಬ್ರಾಹ್ಮಣಿ ಕ್ಯಾಂಪಿನ ಸಕಿಪ್ರಾ ಶಾಲೆ ಅತಿಥಿ ಶಿಕ್ಷಕ ಎಚ್.ಪಂಪಾಪತಿ ಹೇಳಿದರು.
ನಗರದ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ 177ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ವೈಚಾರಿಕ ನಿಲುವುಗಳ ಕುರಿತು ಉಪನ್ಯಾಸ ನೀಡಿದರು. ಎಲ್ಲರೂ ಒಂದೇ ಎನ್ನುವ ಶರಣ ತತ್ವವನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ, ಸಹೋದರೆ, ಸಮಾನತೆ ನೆಲೆಸಲು ಸಾಧ್ಯ ಎಂದರು.
ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಮನುಷ್ಯ ಸ್ವಾರ್ಥ ಮನಸ್ಥಿತಿಯಿಂದ ವಿಮುಖನಾಗಬೇಕಿದೆ. ಸಹಿಷ್ಣುತೆಯಿಂದ ಸಮಾಜದಲ್ಲಿನ ಭೇದ ಭಾವ ತೊಲಗಿಸಲು ಸಾಧ್ಯ ಎಂದು ಹೇಳಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ತೇಜಸ್ವಿನಿ ಅಶೋಕ ಅವರನ್ನು ಸನ್ಮಾನಿಸಲಾಯಿತು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‌ಸಾಬ್, ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಕೆ.ಚಂದ್ರಶೇಖರ, ಎಸ್.ಶಾಮಸುಂದರರಾವ್, ಅಶೋಕ, ಎಸ್.ರಾಮು, ಪೀರಾಸಾಬ್, ಬಿ.ಎಂ.ಪುಷ್ಪಾ, ಬಿ.ಎಂ.ರುದ್ರಯ್ಯ, ತೆಂಗಿನಕಾಯಿ ತಿಪ್ಪೇಸ್ವಾಮಿ, ಅಂಬಿಗರ ಮಂಜುನಾಥ, ಜೀರು ಲೋಕೇಶ್ ಇತರರಿದ್ದರು.