ಪಿಡಿಒ ಏಕಪಕ್ಷೀಯ ವರ್ತನೆ ಸಲ್ಲ

21-DVD-3
ಪರಮಮ್ಮ ಗುಡದಪ್ಪ, ದ್ಯಾವಮ್ಮ ತಿಮ್ಮಣ್ಣ, ಶಿವಮ್ಮ ಅಮರಪ್ಪ.
Published on

ದೇವದುರ್ಗ: ಜಾಲಹಳ್ಳಿ ಸಮೀಪದ ಹೊಸೂರು ಸಿದ್ದಾಪುರ ಗ್ರಾಪಂ ಪಿಡಿಒ ಶಂಕರ ಕೊಟ್ಟೆಗಲ್ ವಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸದಸ್ಯೆಯರಾದ ಪರಮಮ್ಮ ಗುಡದಪ್ಪ, ದ್ಯಾವಮ್ಮ ತಿಮ್ಮಣ್ಣ, ಶಿವಮ್ಮ ಅಮರಪ್ಪ ಆರೋಪಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಗ್ರಾಪಂ ಸದಸ್ಯರಾಗಿ ಮೂರು ವರ್ಷ ಕಳೆದಿದ್ದು, ಪಿಡಿಒ ಶಂಕರ್ ಕೊಟ್ಟೆಗಲ್ ಪಂಚಾಯಿತಿಯ ಯಾವ ವಿಚಾರವನ್ನೂ ಗಮನಕ್ಕೆ ತರುತ್ತಿಲ್ಲ. ಗ್ರಾಪಂ ಸಾಮಾನ್ಯ ಸಭೆಯ ನಡಾವಳಿ ಪ್ರತಿಗಳು ಕೇಳಿದರೆ ನೀವು ಏನು ಮಾಡುತ್ತಿರಿ. ನಿಮಗೆ ಓದಲು ಬರೆಯಲು ಬರುವುದಿಲ್ಲ ಎಂದು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

15ನೇ ಹಣಕಾಸು ಯೋಜನೆಯ ಅನುದಾನವನ್ನು ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅನಗತ್ಯ ಮಾತನಾಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ನೋವಾಗಿದೆ. ಜಿಪಂ ಸಿಇಒ ಈ ಕುರಿತು ಗಮನಹರಿಸಿ ಪಿಡಿಒ ವಿರುದ್ಧ ಕ್ರಮ ವಹಿಸಬೇಕು.

ನಿರ್ಲಕ್ಷೃ ಮಾಡಿದರೆ ಸದಸ್ಯತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪರಮಮ್ಮ ಗುಡದಪ್ಪ, ದ್ಯಾವಮ್ಮ ತಿಮ್ಮಣ್ಣ, ಶಿವಮ್ಮ ಅಮರಪ್ಪ ಎಚ್ಚರಿಸಿದರು. ಸದಸ್ಯರಾದ ರಂಗಪ್ಪ ಕಾವಲಿ, ಕರಿಯಪ್ಪ ಬೊಮ್ಮನಹಳ್ಳಿ. ಸಂಜೀವಣ್ಣ ದಳಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net