More

    ಮಾದಾಪುರ ಗ್ರಾಪಂಗೆ ಪಿಡಿಒ ಇಲ್ಲದೆ ತೊಂದರೆ

    ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದ ಅವಧಿಯೊಳಗೆ 3 ಜನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಇದೀಗ ಅಧಿಕಾರ ವಹಿಸಿಕೊಂಡ 4 ದಿನದಲ್ಲೇ ನೂತನ ಪಿಡಿಒ ವರ್ಗಾವಣೆ ಆಗಿದ್ದು, ಪಿಡಿಒ ಇಲ್ಲದೆ ಪಂಚಾಯಿತಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳಿಗಾಗಿ ಪರದಾಡುವಂತಾಗಿದೆ.

    ಮಾದಾಪುರ ಗ್ರಾಮ ಪಂಚಾಯಿತಿ ಸೋಮವಾರಪೇಟೆ ಮಡಿಕೇರಿ ರಾಜ್ಯ ಹೆದ್ದಾರಿ ಮಧ್ಯಭಾಗದಲ್ಲಿದ್ದು, ಬೆಳೆಯುತ್ತಿರುವ ಗ್ರಾಮ ಪಂಚಾಯಿತಿಯಲ್ಲಿ ಒಂದಾಗಿದೆ. 2018ರಲ್ಲಿ ಸಂಭವಿಸಿದ ಮೇಘಸ್ಫೋಟ, ಜಲಪ್ರಳಯದಿಂದ ಕೊಡಗಿನ ಹಲವು ಜನರು ಮನೆ ಕಳೆದುಕೊಂಡಿದ್ದು ಮಾದಾಪುರ ಪಂಚಾಯಿತಿಯ ಜಂಬೂರು ಗ್ರಾಮದಲ್ಲಿ ಸಂತ್ರಸ್ತರಿಗೆ 411 ಮನೆಗಳನ್ನು ಸರಕಾರ ನಿರ್ಮಿಸಿಕೊಟ್ಟಿದೆ. ಇದರಿಂದ ಜನಸಂಖ್ಯೆ ಹೆಚ್ಚಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ, ಜಂಬೂರು ಗ್ರಾಮದಲ್ಲಿ ಬರದ ಛಾಯೆಯಿಂದ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ. ಮಾದಾಪುರ ಗ್ರಾಪಂನಲ್ಲಿ ಪ್ರಸಕ್ತ ಸಾಲಿನಲ್ಲಿ ಈಗಾಗಲೇ 4 ಜನ ಗ್ರಾಪಂ ಅಧ್ಯಕ್ಷರು ಅಧಿಕಾರ ಅನುಭವಿಸಿದ್ದಾರೆ. ಆಗಾಗ ಪಿಡಿಒಗಳ ವರ್ಗಾವಣೆಯಿಂದ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ತೊಡಕಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ಡಿ.ಅಂತೋಣಿ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

    ಕಳೆದ 8 ತಿಂಗಳಿನಿಂದ ಮಾದಾಪುರ ಗ್ರಾಪಂ ಪಿಡಿಒ ಆಗಿದ್ದ ಸುಮೇಶ ಅವರನ್ನು ಗುಡ್ಡೆಹೊಸೂರು ಗ್ರಾಪಂಗೆ ವರ್ಗಾಹಿಸಲಾಗಿದೆ. ಅವರ ಜಾಗಕ್ಕೆ ಸುರೇಶ ಎಂಬವರನ್ನು ನೇಮಿಸಿದ್ದು, ಅವರು ಬಂದು 4 ದಿನ ಕರ್ತವ್ಯ ನಿರ್ವಹಿಸಿದ ನಂತರ ಪೊನ್ನಂಪೇಟೆ ಗ್ರಾಪಂಗೆ ಪಿಡಿಒ ಆಗಿ ವರ್ಗಾಯಿಸಲಾಗಿದೆ.
    ಈ ನಡುವೆ ಜಂಬೂರು ದೊಡ್ಡಿಬಾಣೆ ವಿಭಾಗದಲ್ಲಿ ಕುಡಿಯುವ ನೀರಿನ ಜಲಜೀವನ್ ಯೋಜನೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಅಭಿವೃದ್ಧಿ ಅಧಿಕಾರಿ ಇಲ್ಲದೆ ಪಂಚಾಯಿತಿ ಆಡಳಿತಕ್ಕೆ ಹಿನ್ನಡೆಯಾಗಿದೆ. ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಪಡೆಯಲು ಪರದಾಡುವಂತಾಗಿದೆ. ಕೊಡಗು ಜಿಪಂ ಸಿಇಒ ಅವರು ಮಾದಾಪುರ ಗ್ರಾಪಂಗೆ ಕೂಡಲೇ ಪಿಡಿಒ ಅವರನ್ನು ನೇಮಿಸಿ ಸಾರ್ವಜನಿಕ ಕೆಲಸಗಳನ್ನು ಸರಾಗವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಪಿ.ಡಿ.ಅಂತೋಣಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts