More

    ಹೊನ್ನಾಳಿಯಲ್ಲಿ ಯುಗಾದಿ ಬೇಸಾಯ

    ಹೊನ್ನಾಳಿ: ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಮಂಗಳವಾರ ಯುಗಾದಿ ಬೇಸಾಯ ಆರಂಭಿಸಿದರು.

    ಹೊಸ ವರ್ಷ ಯುಗಾದಿಯಂದು ಮಾಡುವ ಕೆಲಸಗಳು ಒಳ್ಳೆಯದಾಗುತ್ತವೆ ಎಂಬುದು ಗ್ರಾಮೀಣರಲ್ಲಿ ನಂಬಿಕೆ. ಹಳ್ಳಿಗಳಲ್ಲಿ ಯುಗಾದಿ ಹಬ್ಬದಂದು ಎತ್ತುಗಳಿಗೆ ಪೂಜೆ, ಅಲಂಕಾರ ಮಾಡಿ, ನೈವೇದ್ಯ ಅರ್ಪಣೆ ಮಾಡುತ್ತಾರೆ.

    ಬಳಿಕ ಜಮೀನುಗಳಿಗೆ ಕರೆ ತಂದು ಭೂದೇವಿಗೆ ಪೂಜೆ ಸಲ್ಲಿಸಿ, ಒಂದೆರಡು ಸುತ್ತು ನೇಗಿಲು ಹೊಡೆದು ಉಳುಮೆ ಮಾಡಿ ಮುಂದಿನ ಕೃಷಿ ಚಟುವಟಿಕೆಗಳಿಗೆ ಹೆಜ್ಜೆ ಇಟ್ಟು ಹೊಸ ವರ್ಷಕ್ಕೆ ಹೊಸ ಬೇಸಾಯ ಪ್ರಾರಂಭಿಸಿದರು.

    ತಾಲೂಕಿನ ಬೇಲಿಮಲ್ಲೂರು, ಮಾಸಡಿ, ಅರಕೆರೆ, ನರಸಗೊಂಡನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಯುಗಾದಿ ಬೇಸಾಯ ಆರಂಭಿಸಿ, ಈ ಬಾರಿ ಉತ್ತಮ ಮಳೆ, ಬೆಳೆ ನೀಡಪ್ಪ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.

    ತಾಲೂಕಿನ ಬೇಲಿಮಲ್ಲೂರು ಗ್ರಾಮದ ರೈತ ಬಸವರಾಜಪ್ಪ ಎಂಬುವವರು ಕುಟುಂಬ ಸಮೇತ ಜಮೀನಿಗೆ ಬಂದು ಎತ್ತುಗಳಿಗೆ ಪೂಜೆ ಹಾಗೂ ಅಲಂಕಾರ ಮಾಡಿ ಒಂದೆರಡು ಸುತ್ತು ಉಳುಮೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts