

ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖ ರೋಜಾದ
ಜಿಡಿಎ ಬಡಾವಣೆಯಲ್ಲಿ ಕಳ್ಳರ ಕೃತ್ಯ
ಕಲಬುರಗಿ : ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖ ರೋಜಾದ ಜಿಡಿಎ ಬಡಾವಣೆಯಲ್ಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮನೆಯ ಬೀಗ ಮುರಿದು ನಗ-ನಾಣ್ಯ ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ರಾಚಣ್ಣಗೌಡ ಪಾಟೀಲ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಸುಮಾರು ೨.೩೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಪಿಡಿಒ ಅವರ ಮಕ್ಕಳು ಹೊರಗೆ ಹಾಲ್‌ನಲ್ಲಿ ಮಲಗಿದ್ದರು. ಅವರು ಕೋಣೆಯಲ್ಲಿ ಮಲಗಿದ್ದರು. ಇನ್ನೊಂದು ಕೋಣೆಯಲ್ಲಿ ಅವರ ತಾಯಿ ಮಲಗಿಕೊಂಡಿದ್ದರು. ತಾಯಿ ಕೋಣೆಯಲ್ಲಿದ್ದ ಆಲಮರಾವನ್ನು ಮುರಿದು ಅದರಲ್ಲಿಟ್ಟಿದ್ದ ೪೦ ಗ್ರಾಂ ಚಿನ್ನಾಭರಣಗಳನ್ನು ಹಾಗೂ ೩ ಸಾ.ರೂ.ನಗದು ಹಣವನ್ನು ಕಳ್ಳರು ಕಳವು ಮಾಡಿಕೊಂಡಿಕೊAಡು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಚೌಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.