ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ ಇನ್ನಿಲ್ಲ

Sukri gowda
Published on

ಕಾರವಾರ: ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ ಬುಧವಾರ ತಡರಾತ್ರಿ  ನಿಧನ ಹೊಂದಿದರು.

ಅಂಕೋಲಾ ಬಡಗೇರಿಯ ಸುಕ್ರಿ ಗೌಡ ಅವರಿಗೆ 91 ವರ್ಷ ವಯಸ್ಸಾಗಿತ್ತು.ಕೆಲ ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ಅವರು ಅನಾರೋಗ್ಯದಿಂದ ದಾಖಲಾಗಿದ್ದರು. ಬುಧವಾರ ರಾತ್ರಿ  2.30  ರ ಹೊತ್ತಿಗೆ ನಿಧನ ಹೊಂದಿದರು. ಮೃತರಿಗೆ, ಸೊಸೆ, ಮೊಮ್ಮಗ ಬಂಧುಗಳು, ಅಪಾರ ಅಭಿಮಾನಿಗಳಿದ್ದಾರೆ.

ಹಾಲಕ್ಕಿ ಒಕ್ಕಲಿಗ ಸಮುದಾಗದ ಪುಗಡಿ, ನೃತ್ಯಕ್ಕೆ ಸರಿಯಾಗಿ ಜಾನಪದ ಹಾಡು ಹಾಡಿ ಅವರು ಪ್ರಸಿದ್ಧರಾಗಿದ್ದರು.ಸಾರಾಯಿ ವಿರೋಧಿ ಹೋರಾಟ, ಅಕ್ಷರ ಕಲಿಕೆ ಅಭಿಯಾನದಲ್ಲಿ ಪ್ರಸಿದ್ಧರಾಗಿದ್ದರು.2017 ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ದೊರಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net