ಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು ನೀಡಿದ ಮಲ್ಲಿಕಾರ್ಜುನ ಖರ್ಗೆ

Mallikarjun Kharge
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಸದ್ಯದಲ್ಲೇ ಬದಲಾವಣೆ ಮಾಡುವ ಸುಳಿವುವನ್ನು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ನೀಡಿದರು.

ಓಡಿಸ್ಸಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ.

ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತವೆ ಎಂದು ಕಲಬುರಗಿಯಲ್ಲಿ ಇಂದು ದೆಹಲಿ ತೆರಳುವ ಮುನ್ನ ಪತ್ರಕರ್ತರಿಗೆ ತಿಳಿಸಿದರು.

ಈ ಬಗ್ಗೆ ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಆಗಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ.

ಇನ್ನೂ ಒಂದು ಎರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತವೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ನನ್ನ ಭೇಟಿ ಮಾಡಿರುವುದು ದೊಡ್ಡ ವಿಚಾರ ಏನಲ್ಲ.

ನಾನು ಎಐಸಿಸಿ ಅಧ್ಯಕ್ಷ ಎಲ್ಲರೂ ಬಂದು ಭೇಟಿ ಮಾಡುತ್ತಾರೆ ಇದು ದೊಡ್ಡ ಮಾತಾ ? ಎಂದು ಮಾಧ್ಯಮದವರಿಗೆ ಮರು ಪ್ರಶ್ನಿಸಿದರು.

ನಮ್ಮ‌ ರಾಜ್ಯದವರಿಗೆ ಬೇಗ ಅಪಾಯಿಂಟಮೆಂಟ್ ಸಿಗುತ್ತದೆ. ಬಂದವರಿಗೆ ಬೇಡ ಅನ್ನಲು ಆಗುತ್ತಾ ?. ಎಲ್ಲರೂ ಬಂದು ಭೇಟಿ ಆಗುತ್ತಾರೆ. ಡಾ.ಜಿ.ಪರಮೇಶ್ವರ ಬತ್ತಾರೆ, ಡಿಕೆ ಶಿವಕುಮಾರ ಬರುತ್ತಾರೆ ಸತೀಶ್ ಜಾರಕಿಹೊಳಿ ಬರುತ್ತಾರೆ, ಸಿಎಂ ಸಿದ್ರಾಮಯ್ಯ ಫೋನ್ ಮಾಡ್ತಾರೆ ಇದರಲ್ಲಿ ವಿಶೇಷ ಏನಿಲ್ಲ ಎಂದು ಖರ್ಗೆ ಹೇಳಿದರು.

ಇದಕ್ಕೆ ಇಲ್ಲದ ಉಹಾಪೋಹ ಸೃಷ್ಟಿಸಿ ಗೊಂದಲ ಸೃಷ್ಟಿ ಮಾಡಬೇಡಿ. ಬೇಡವಾದ ಗೊಂದಲ ಸೃಷ್ಟಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನ ನಡಿತಿದೆ. ಇದರಿಂದ ನಮ್ಮ ನಾಯಕರೂ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net