

ತಲ್ಲೂರ: ನೀರು, ಮನೆ ಕರ ಸೇರಿ ಇತ್ಯಾದಿ ಕರಗಳನ್ನು ಸಾರ್ವಜನಿಕರು ಕಾಲಕಾಲಕ್ಕೆ ಸಂದಾಯ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ತಿಳಿಸಿದರು.
ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ವಾರ್ಡ್ಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮನೆಗಳಿಗೆ ತೆರಳಿ ತೆರಿಗೆ ವಸೂಲಿ ಅಭಿಯಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬರು ಬಾಕಿ ತೆರಿಗೆ ಪಾವತಿಸಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ಸತೀಶ ಬಡಿಗೇರ ಮಾತನಾಡಿ, 2024&25ನೇ ಸಾಲಿನ ಮಾರ್ಚ್ ತಿಂಗಳ ತೆರಿಗೆ ಪಾವತಿಗೆ ಕೊನೆಯ ಅವಕಾಶವಿದ್ದು, ಪಾವತಿಸದವರಿಗೆ ಶೇ.5 ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ, ಪಿಡಿಒ ಎಚ್.ಕೆ.ಚೌರಡ್ಡಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ, ಚಂದ್ರು ಮುರಗೋಡ, ಗುರುಪುತ್ರ ಬಡಿಗೇರ, ಪವಿತ್ರಾ ಈಟಿ, ಯಶೋದಾ ಕಾಶಪ್ಪನವರ, ಪ್ರೇಮಾ ಹುಬ್ಬಳ್ಳಿ, ಬಸವರಾಜ ಉಗರಗೋಳ ಇತರರಿದ್ದರು.