ನಿಯಮದಂತೆ ಹಣ ಪಾವತಿಸಿ

ಕನಕಗಿರಿ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ವಾರದ ಸಂತೆ ಭೂ ಬಾಡಿಗೆ, ತೆಂಗಿನ ಕಾಯಿ ಮಾರಾಟ ಹರಾಜು ಪ್ರಕ್ರಿಯೆ ನಡೆಯಿತು. ಶಿರಸ್ತೆದಾರರಾದ ಶರಣಪ್ಪ, ಅನಿತಾ ಇಂಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಪ್ರಮುಖರಾದ ರಾಜೇಶ ಬೆಲ್ಲಂಕೊಂಡಿಮಠ, ನಾಗೇಂದ್ರ ನಾಯಕ ಇತರರಿದ್ದರು.
ಕನಕಗಿರಿ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ವಾರದ ಸಂತೆ ಭೂ ಬಾಡಿಗೆ, ತೆಂಗಿನ ಕಾಯಿ ಮಾರಾಟ ಹರಾಜು ಪ್ರಕ್ರಿಯೆ ನಡೆಯಿತು. ಶಿರಸ್ತೆದಾರರಾದ ಶರಣಪ್ಪ, ಅನಿತಾ ಇಂಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಪ್ರಮುಖರಾದ ರಾಜೇಶ ಬೆಲ್ಲಂಕೊಂಡಿಮಠ, ನಾಗೇಂದ್ರ ನಾಯಕ ಇತರರಿದ್ದರು.
Published on

ಕನಕಗಿರಿ: ಪಟ್ಟಣದ ಧಾರ್ಮಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಸಗಟು ವ್ಯಾಪಾರ ಹಾಗೂ ವಾರದ ಸಂತೆ ಭೂ ಬಾಡಿಗೆ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು.

ಶಿರಸ್ತೆದಾರರಾದ ಶರಣಪ್ಪ, ಅನಿತಾ ಇಂಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ ನೇತೃತ್ವದಲ್ಲಿ ನಡೆದ ಹರಾಜಿನಲ್ಲಿ ವಾಲ್ಮೀಕಿ ವೃತ್ತ, ತುಕರಾಮಪ್ಪ ನಿವಾಸದ ಮುಖ್ಯರಸ್ತೆ ಹಾಗೂ ರಾಜಬೀದಿಯ ದೇವಸ್ಥಾನ ಜಾಗದ ಟೆಂಡರ್ ವ್ಯಾಪ್ತಿಗೆ ಒಳಪಟ್ಟು ಮುಂಬರುವ ಯುಗಾದಿವರೆಗೆ ತೆಂಗಿನಕಾಯಿ ಸಗಟು ವ್ಯಾಪಾರವು ತೆಂಗಿನಕಾಯಿ ವ್ಯಾಪಾರಿ ಪ್ರಕಾಶ ತೆಂಗಿನಕಾಯಿ ಅವರಿಗೆ 29 ಲಕ್ಷ ರೂ.ಗೆ ದೊರೆಯಿತು. ಕೃಷ್ಣ ನಾಯಕ ಅವರಿಗೆ ವಾರದ ಸಂತೆ ಭೂ ಬಾಡಿಗೆ 7.05 ಲಕ್ಷ ರೂ. ಹರಾಜಾಗಿದೆ.

ದೇವಸ್ಥಾನ ಸಮಿತಿ ನಿಯಮದಂತೆ ಟೆಂಡರ್ ಪಡೆದವರು ಕಾಲ-ಕಾಲಕ್ಕೆ ಕಡ್ಡಾಯವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಹರಾಜಿನ ಹಣ ಪಾವತಿಸಬೇಕು ಎಂದು ಸೂಚಿಸಲಾಯಿತು. ಟೆಂಡರ್‌ದಾರರಿಗೆ ಸಮಸ್ಯೆಯಾದಲ್ಲಿ ಪತ್ರದ ಮೂಲಕ ಪರಿಹರಿಸಿಕೊಳ್ಳುಬೇಕು. ಹಣದ ವ್ಯವಹಾರದಲ್ಲಿ ಟೆಂಡರದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ತಿಳಿಸಿದ್ದಾರೆ.

ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಪ್ರಾಕೃಪಸ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಪ್ರಮುಖರಾದ ಬಿ.ವಿ.ಜೋಶಿ, ಕನಕರೆಡ್ಡಿ ಮಹಲಿನಮನಿ, ರಾಜೇಶ ಬೆಲ್ಲಂಕೊಂಡಿಮಠ, ನಾಗೇಂದ್ರ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net