

ಹುಬ್ಬಳ್ಳಿ: ಪಾನ್ಶಾಪ್ ಮಾಲೀಕ ಹಾಗೂ ಇಬ್ಬರು ಆಟೋ ಚಾಲಕರ ಮಧ್ಯೆ ಜಗಳ ನಡೆದು ಕತ್ತರಿಯಿಂದ ಚುಚ್ಚುವ ಹಂತಕ್ಕೆ ಹೋಗಿದ್ದು, ಓರ್ವನಿಗೆ ಗಾಯವಾಗಿದೆ.
ಪಾನ್ಶಾಪ್ ಮಾಲೀಕನಿಗೆ ಹಲ್ಲೆ ಮಾಡಿದ ಆರೋಪದಡಿ ಆಟೋ ಚಾಲಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
69 ವರ್ಷದ ನಿವೃತ್ತ ನೌಕರರೊಬ್ಬರು ಪಾನ್ಶಾಪ್ ನಡೆಸುತ್ತಿದ್ದರು.
ಈ ಶಾಪ್ನಲ್ಲಿ 30 ರೂ. ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ, 100 ರೂ. ಕೊಟ್ಟಿದ್ದೇವೆ ಎಂದು ಗಲಾಟೆ ತೆಗೆದು, ಹಲ್ಲೆ ಮಾಡಲು ಆಟೋ ಚಾಲಕರು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಓರ್ವ ಆಟೋ ಚಾಲಕನಿಗೆ ಕತ್ತರಿಯಿಂದ ಚುಚ್ಚಿದ ಪಾನ್ಶಾಪ್ ಮಾಲೀಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.