

ಹಳೆಯಂಗಡಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಪಾಂಡುರಂಗ ಸ್ವಾಮಿಯ ಪ್ರತಿಷ್ಠಾಪನೆ ವರ್ಧಂತ್ಯುತ್ಸವ ನಡೆಯಿತು.
ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ವಿಶೇಷ ಪ್ರಾರ್ಥನೆ, ನವಕ ಕಲಶಾಭಿಷೇಕ, ದೇವರಿಗೆ ತುಳಸಿ ಅಲಂಕಾರ, ಗಂಧ ಮತ್ತು ಚಂದನ ಅಲಂಕಾರ, ಭಕ್ಷ್ಯಾಲಂಕಾರ, ಯಕ್ಷಗಾನ ವೇಷಾಲಂಕಾರ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಮಥುರಾದಿಂದ ತರಿಸಲಾದ ವಿಶೇಷ ವಸ್ತ್ರಲಂಕಾರ, ಸಂಜೆ ಸರ್ವಾಲಂಕಾರ ನಡೆಯಿತು.
ವಿಶೇಷ ಆರಾಧನೆ ಅಂಗವಾಗಿ ಸಾಮವೇದ ಪಾರಾಯಣ, ನಾಗಸ್ವರ ವಾದನ, ದ್ವಂದ್ವ ಪಿಟೀಲು ವಾದನ ನಡೆಯಿತು. ವಿವಿಧ ಕಲಾತಂಡಗಳಿಂದ ಯಕ್ಷಗಾನಾರ್ಚನೆ, ಭಜನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ, ವೇಣು ವಾದನ ನಡೆಯಿತು. ಸಂಜೆ ಅಷ್ಟಾವಧಾನ ಸೇವೆ ಸಹಿತ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.