ಕುಡಿಯುವ ನೀರು ಪೋಲು, ದುರಸ್ತಿಗೆ ಆಗ್ರಹ

New Project (50)
Published on

ಮೂಲ್ಕಿ: ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಶಾಲೆ ಬಳಿ ಕುಡಿಯುವ ನೀರು ಪೋಲಾಗುತ್ತಿದ್ದು ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹತ್ತನೇ ತೋಕೂರು ಓಂಕಾರೇಶ್ವರ ಭಜನಾ ಮಂದಿರ ಅಧ್ಯಕ್ಷ ಸದಾಶಿವ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಸೋರಿಕೆಯಾಗಿ ಕಿನ್ನಿಗೋಳಿ-ಹಳೆಯಂಗಡಿ ಹೆದ್ದಾರಿಯಲ್ಲಿ ಹರಿಯುತ್ತಿದ್ದು, ಕಳೆದ ಬಾರಿ ರಸ್ತೆ ಹಾಳಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ಈ ಬಾರಿ ರಸ್ತೆ ಪುನಃ ಡಾಮರೀಕರಣವಾಗಿದ್ದು ಮತ್ತೆ ನೀರು ನಿಂತು ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಳೆದ ಗ್ರಾಮಸಭೆಯಲ್ಲಿ ಅನೇಕ ಸಾರಿ ಪ್ರಸ್ತಾಪ ಮಾಡಿದ್ದರೂ ಇದುವರೆಗೂ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net