ದೊಡ್ಡಬೇಲಾಳು ಡೇರಿಗೆ ಪಾವನಾ ಅಧ್ಯಕ್ಷತೆ

IMG-20250515-WA0085
ಪಿರಿಯಾಪಟ್ಟಣ ತಾಲೂಕು ದೊಡ್ಡ ಬೇಲಾಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷೆ ಪಾವನಾ ಹಾಗೂ ಉಪಾಧ್ಯಕ್ಷೆ ಲಲಿತಾ ಅವರನ್ನು ನಿರ್ದೇಶಕರು ಹಾಗೂ ಬೆಂಬಲಿಗರು ಅಭಿನಂದಿಸಿದರು.
Published on

ರಾವಂದೂರು: ದೊಡ್ಡಬೇಲಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪಾವನಾ, ಉಪಾಧ್ಯಕ್ಷರಾಗಿ ಲಲಿತಾ ಅವಿರೋಧವಾಗಿ ಆಯ್ಕೆಯಾದರು.

ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಪಾವನಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಾ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಯತೀಂದ್ರ ಘೋಷಿಸಿದರು.

ನಿರ್ದೇಶಕರಾದ ಡಿ ನಾಗೇಂದ್ರ ರಮೇಶ್, ಪುಟ್ಟರಾಜೇಗೌಡ , ವಿಜಯದೇವರಾಜೇ ಅರಸ್, ರಮೇಶ್, ವೀರಭದ್ರೇಗೌಡ, ನಂಜುಂಡಸ್ವಾಮಿ, ಕಮಲಮ್ಮ, ಪಾಪಯ್ಯ ಹಾಗೂ ಮುಖಂಡರಾದ ದೇವೇಂದ್ರ, ಲಕ್ಷ್ಮೀಕಾಂತರಾಜ್ ಅರಸ್, ಜವರೇಗೌಡ, ಸಣ್ಣ ತಮ್ಮೇಗೌಡ, ಹರೀಶ್ ರಾಜೇಅರಸ್ , ಸೋಮರಾಜೇ ಅರಸ್, ಸುಬ್ರಹ್ಮಣ್ಯ ರಾಜೇಅರಸ್, ಹುಚ್ಚಯ್ಯ, ಲಕ್ಷ್ಮಣ ಭೋವಿ, ಜಿ.ಟಿ. ಚಂದ್ರು, ಪುರುಷೋತ್ತಮ್, ಕಾರ್ಯದರ್ಶಿ ಮಂಜುನಾಥ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net