ಸೌಡ ದೇವಸ್ಥಾನದಲ್ಲಿ ಪವಮಾನ ಅಭಿಷೇಕ

rama-1
Published on

ಜನ್ನಾಡಿ: ಸೌಡದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ ಭಾನುವಾರ ನೆರವೇರಿತು. ಮಧ್ಯಾಹ್ನ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪವಮಾನ ಅಭಿಷೇಕ, ಮಹಾಮಂಗಳಾರತಿ ಹಾಗೂ ಮಹಾ ಸಮಾರಾಧನೆ ನಡೆಯಿತು. ರಾತ್ರಿ ವಿಶೇಷ ವಸಂತ ಪೂಜೆ, ಪಾನಕ ಸೇವೆ ಹಾಗೂ ಶ್ರೀರಾಮರಕ್ಷಾ ಭಜನಾ ಮಂಡಳಿಯಿಂದ ಭಜನೆ ಜರುಗಿತು. ಪ್ರಧಾನ ಅರ್ಚಕ ಸೌಡ ರಾಮಚಂದ್ರ ವಿಠ್ಠಲ್ ಭಟ್, ಆಡಳಿತ ಮೋಕ್ತೆಸರ ರಾದ ಯು.ಕಮಲಾಕ್ಷಿ ಪೈ ಬಿದ್ಕಲ್‌ಕಟ್ಟೆ, ಪದ್ಮನಾಭ ಭಂಡಾರ್ಕರ್ ಸೌಡ, ಮೋಹನ ಪ್ರಭು ಬೆಳ್ವೆ, ಗಾವಳಿ ನಾರಾಯಣ ಶೆಣೈ, ಹಾಲಾಡಿ ಪದ್ಮನಾಭ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net