ಬಾಲವೈಜ್ಞಾನಿಕ ಪ್ರದರ್ಶನಕ್ಕೆ ಅರಸೀಕೆರೆ ವಿದ್ಯಾರ್ಥಿ ಆಯ್ಕೆ

Arasikere_BalaVignani
Published on

ತುಮಕೂರು: ಬೆಂಗಳೂರಿನ ರಾಜ್ಯ ಶಿಕ್ಷಣಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ಬಾಲವೈಜ್ಞಾನಿಕ ಪ್ರದರ್ಶನ ಸ್ಪರ್ಧೆಯಲ್ಲಿ ಪಾವಗಡ ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಎಚ್​.ಹೃತಿಕ್​ ಭಾಗವಹಿಸಿ ತೃತೀಯ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

'ಸದೃಢ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ' ಎಂಬ ಘೋಷವಾಕ್ಯದಡಿ ತ್ಯಾಜ್ಯ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಪ್ಲಾಸ್ಟಿಕ್​ ತ್ಯಾಜ್ಯಗಳಿಂದ ಪರಿಸರಕ್ಕೆ ಮಾಲಿನ್ಯಕಾರಕ ವಾಗದಂತೆ ಅದನ್ನು ಮರುಬಳಕೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಸಾಬೀತು ಮಾಡಿ ತೋರಿಸಿದ ಮಾದರಿ ಇದಾಗಿದೆ. ವಿಜ್ಞಾನ ಶಿಕ್ಷಕ ಜಿ.ಎಚ್​.ರೇಣುಕರಾಜ್​ ಮಾರ್ಗದರ್ಶನ ಮಾಡಿದ್ದಾರೆ.

ಅ.4 ರಂದು ರಾಜ್ಯಮಟ್ಟದ ಸ್ಪರ್ಧೆ ಬೆಂಗಳೂರಿನ ರಾಜ್ಯ ಶಿಕ್ಷಣಸಂಶೋಧನೆ ಮತ್ತು ತರಭೇತಿ ಸಂಸ್ಥೆಯಲ್ಲಿ ನಡೆಯಲಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಮಾಧವರೆಡ್ಡಿ, ಡಯಟ್​ ಪ್ರಾಂಶುಪಾಲ ಗಂಗಾಧರ್​, ಬಿಇಒ ರೇಣುಕಮ್ಮ, ಎಸ್​ಡಿಎಂಸಿ ಅಧ್ಯಕ್ಷ ಪ್ರೇಮಕುಮಾರ್​ ವಿದ್ಯಾರ್ಥಿ ಹೃತಿಕ್​ರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net