ರಾಷ್ಟ್ರದ ಮೇಲಿನ ಪ್ರೀತಿಯೇ ದೇಶ ಭಕ್ತಿ

kota
Published on

ಕೋಟ: ದೇಶಭಕ್ತಿ ಎಂದರೆ ಒಂದು ರಾಷ್ಟ್ರದ ಮೇಲಿನ ಪ್ರೀತಿ ಮತ್ತು ಹೆಮ್ಮೆ, ಅದರ ಒಳಿತಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ವಾಡುವ ಮಟ್ಟಕ್ಕೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಹೋರಾಟದ ಸಮಯದಲ್ಲಿ ದೇಶಭಕ್ತಿಯ ಮಹಾನ್ ಪ್ರಜ್ಞೆಯನ್ನು ತೋರಿಸಿದರು ಎಂದು ಕಾಂಗ್ರೆಸ್ ಮುಖಂಡ ಗೋಪಾಲ ಬಂಗೇರ ಹೇಳಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ.ಎ ಕುಂದರ್ ಅಧ್ಯಕ್ಷತೆ ವಹಿಸಿದ್ದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ರವೀಂದ್ರ ಕಾಮತ್ ಗುಂಡ್ಮಿ, ಕೋಟ ವ್ಯವಸಾಯಕ ಬ್ಯಾಂಕ್‌ನ ನಿರ್ದೇಶಕ ಚಂದ್ರ ಪೂಜಾರಿ, ಅಮತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್.ಕೆ ನೆಲ್ಲಿಬೆಟ್ಟು ಪ್ರಮುಖರಾದ ಮೊಹಮ್ಮದ್ ಸುಹಾನ್, ದಿನೇಶ್ ಬಂಗೇರ ಗುಂಡ್ಮಿ, ರಾಜೇಶ್ .ೆ, ಶ್ರೀನಿವಾಸ್ ವಡ್ಡರ್ಸೆ, ಸುರೇಶ್ ಚಚ್ಕೆರೆ, ರವಿ ಪೂಜಾರಿ, ಶ್ರೀಕಾಂತ್ ಆಚಾರ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ ಬಾಲಕೃಷ್ಣ ಪೂಜಾರಿ ಸಸ್ತಾನ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net