

ನಾಪೋಕ್ಲು: ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪಟ್ರಪಂಡ ಮೋಹನ್ ಮುದ್ದಪ್ಪ, ಉಪಾಧ್ಯಕ್ಷರಾಗಿ ನಾಟೋಳಂಡ ಕಸ್ತೂರಿ ಉತ್ತಪ್ಪ ಮೂರನೇ ಬಾರಿ ನೇಮಕವಾಗಿದ್ದಾರೆ.
ಗ್ರಾಹಕರ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಿರ್ದೇಶಕರಾಗಿ ಕುಲ್ಲೇಟಿರ ಕೆ.ಎಂ.ಅರುಣ, ನಾಯಕಂಡ ಟಿ.ಮುತ್ತಪ್ಪ, ಬೊಟ್ಟೋಳಂಡ ಕೆ.ಕುಟ್ಟಪ್ಪ, ಬೊಟ್ಟೋಳಂಡ ಎ.ಪೊನ್ನಯ್ಯ, ಕೊಂಬಂಡ ಕೆ.ಗಣೇಶ್, ಎಚ್.ಎ.ಬೊಳ್ಳು, ಕೇಟೊಳಿರ ಗಣಪತಿ ಮುತ್ತಮ್ಮ, ಪಾಡಿಯಮ್ಮನ ಎ.ಮಹೇಶ್, ಕೆಲೇಟಿರ ಟಿ.ಗಣಪತಿ ಆಯ್ಕೆ ಆಗಿದ್ದಾರೆ. ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ತಿಮ್ಮಯ್ಯ ಇದ್ದರು.