ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಿ

hospital visiting
ದೇವದುರ್ಗ ತಾಲೂಕು ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಎಚ್‌ಒ ಡಾ.ವೆಂಕಟೇಶ ಭೇಟಿನೀಡಿ ಪರಿಶೀಲಿಸಿದರು. ವೈದ್ಯಾಧಿಕಾರಿ ಆರ್.ಎಸ್.ಹುಲಿಮನಿ, ಗ್ರಾಪಂ ಸದಸ್ಯ ಕುಮಾರ ಚಪ್ಪಳಕಿ, ಸಿಬ್ಬಂದಿ ಸುರೇಶ ಇದ್ದರು.
Published on

ದೇವದುರ್ಗ: ಸರ್ಕಾರಿ ಆಸ್ಪತ್ರೆಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ ಎನ್ನುವ ಆಶಯದೊಂದಿಗೆ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಚಿಕಿತ್ಸೆ ನೀಡಬೇಕು. ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿನೀಡಿ ಪರಿಶೀಲಿಸಿದರು. ಇಲ್ಲಿನ ಚಿಕಿತ್ಸೆ, ಸಿಬ್ಬಂದಿ ಕೆಲಸ ಬಗ್ಗೆ ದೂರು ಬರುತ್ತಿವೆ. ಸರ್ಕಾರಿ ಆಸ್ಪತ್ರೆಗಳೇ ಬಡವರಿಗೆ ಆಸರೆಯಾಗಿವೆ.

ಪ್ರತಿಯೊಬ್ಬ ವೈದ್ಯರು ಹಾಗೂ ಸಿಬ್ಬಂದಿ ಸಮಯ ಪಾಲನೆ ಮಾಡಬೇಕು. ಕರ್ತವ್ಯದ ವೇಳೆ ಕೇಂದ್ರ ಸ್ಥಾನದಲ್ಲೇ ಇದ್ದು ಯಾವುದೇ ರೋಗಿಗಳು ಬಂದರೂ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ನೀಡಬೇಕು.

ಬಹುತೇಕ ಸಿಬ್ಬಂದಿ ಸ್ಥಳೀಯರಿದ್ದು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಆಸ್ಪತ್ರೆಯಲ್ಲಿ ಕೊರತೆ ಇರುವ ಸಿಬ್ಬಂದಿಯನ್ನು ಶೀಘ್ರವೇ ವ್ಯವಸ್ಥೆ ಮಾಡಲಾಗುವುದು. ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು.

ಸದ್ಯ ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆಯ ಜತೆ ಅಗತ್ಯ ಸಲಕರಣೆ ಸರಬರಾಜು ಮಾಡಲಾಗುವುದು. ಯಾವುದೇ ಕಾರಣಕ್ಕೂ ಹೊರಗಡೆ ಔಷಧ ಬರೆಯಬಾರದು ಎಂದು ಸೂಚನೆ ನೀಡಿದರು.

ವೈದ್ಯಾಧಿಕಾರಿ ಆರ್.ಎಸ್.ಹುಲಿಮನಿ, ಗ್ರಾಪಂ ಸದಸ್ಯರಾದ ಕುಮಾರ ಚಪ್ಪಳಕಿ, ಸಿಬ್ಬಂದಿ ಸುರೇಶ, ನರ್ಸ್‌ಗಳಾದ ವಾಣಿ, ವಿಶಾಲಾಕ್ಷಿ, ಮುಖಂಡರಾದ ಅಮರೇಶ ನಾಯಕ, ಮೌನೇಶ ದಾಸರ, ರಾನು ನಾಯಕ, ರಂಗನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net