More

    ಹೈಪರ್ ಆರ್ಕ್‌ದಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ

    ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ ಹೈಪರ್ ಆರ್ಕ್ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ. ಪ್ರಥಮವಾಗಿ ಈಚೆಗೆ ಯಶಸ್ವಿ ಚಿಕಿತ್ಸೆ ನಡೆಸಿ ಮತ್ತೊಂದು ಯಶಸ್ಸಿನ ಮೈಲಿಗಲ್ಲು ಸಾಧಿಸಿದೆ. ಮಿದುಳಿನಲ್ಲಿ ದ್ವಿತೀಯ ಹಂತದ ಮೆಟಾಸ್ಟಾಸಿಸ್ ಹಾಗೂ ಪ್ರಥಮ ಹಂತದ ಮೂತ್ರಪಿಂಡದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಗೆ ಅತ್ಯಾಧುನಿಕ ಹೈಪರ್ ಆರ್ಕ್ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಈಗ ಗುಣಮುಖ ಹೊಂದಿದ್ದಾರೆ. ಹೈಪರ್ ಆರ್ಕ್ ಎನ್ನುವುದು ಲಿನಾಕ್-ಆಧಾರಿತ ಅತ್ಯಾಧುನಿಕ ತಂತ್ರಜ್ಞಾನವಾದ ವೇರಿಯನ್ ಟ್ರೂಬೀಮ್ ಲೀನಿಯರ್ ವೇಗವರ್ಧಕದಲ್ಲಿ ಕಾರ್ಯನಿರ್ವಹಿಸುತ್ತದೆ. 2.5 ಎಂಎಂ ಲೀಫ್, ಮಿಲೇನಿಯಮ್ ಮಲ್ಟಿ-ಲೀಫ್ ಕೊಲಿಮೇಟರ್ (ಎಂಎಲ್‌ಸಿ) ಒಳಗೊಂಡಿದೆ. 3ಡಿ ಇಮೇಜ್ ತಂತ್ರಜ್ಞಾನದಿಂದ ನಿರ್ದೇಶಿಸಲ್ಪಟ್ಟ ಅತ್ಯಂತ ನಿರ್ದಿಷ್ಟ ಹಾಗೂ ನಿಖರತೆ ಖಾತ್ರಿಪಡಿಸುವ ಸ್ಟೀರಿಯೊಟಾಕ್ಟಿಕ್ ರೇಡಿಯೊ (ಎಸ್‌ಆರ್‌ಎಸ್) ಯೋಜನಾಬದ್ದ ಚಿಕಿತ್ಸೆ ನೀಡುವಲ್ಲಿ ಅತ್ಯಂತ ಸೂಕ್ಷ್ಮ ಕಿರಣ ಬಳಸಿಕೊಳ್ಳುತ್ತದೆ. ಅತ್ಯಂತ ಸಂಕೀರ್ಣ ಕಾರ್ಯ ವಿಧಾನವನ್ನು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳಿಸುವುದಲ್ಲೇ ಚಿಕಿತ್ಸೆ ಸಮಯ ಕಡಿಮೆ ಮಾಡುತ್ತದೆ. ಗಾಮಾ ನೈಫ್ ಅಥವಾ ಸೈಬರ್‌ನೈಫ್ ವಿಮ್ಯಾಟ್ ತಂತ್ರಜ್ಞಾನ ಸಾಮಾನ್ಯವಾಗಿ 45 ನಿಮಿಷ ತೆಗೆದುಕೊಂಡರೆ, ಹೈಪರ್ ಆರ್ಕ್ ಕಾರ್ಯವಿಧಾನವು ಕೇವಲ 5 ನಿಮಿಷ ತೆಗೆದುಕೊಳ್ಳುತ್ತದೆ.

    ಡಾ. ಪ್ರಭಾಕರ ಕೋರೆ ಹರ್ಷ

    ಹೈಪರ್ ಆರ್ಕ್ ತಂತ್ರಜ್ಞಾನದ ಮೂಲಕ ತಕ್ಷಣವೇ ಚಿಕಿತ್ಸೆ ಪೂರ್ಣಗೊಳಿಸಿ ರೋಗಿಯನ್ನು ಸ್ವಲ್ಪ ಸಮಯದಲ್ಲಿಯೆ ಗುಣಮುಖಗೊಳಿಸಿದ ತಜ್ಞ ವೈದ್ಯರಾದ ಡಾ. ಇಮ್ತಿಯಾಜ್ ಅಹ್ಮದ್, ಡಾ. ಸಪ್ನಾ ಕೆ., ಡಾ. ರಾಘವೇಂದ್ರ ಸಾಗರ, ಬೂಪಾಲನ್ ಬಾಲಾಜಿ ಅವರನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾಹೆರ್ ಉಪಕುಲಪತಿ ಡಾ ನಿತಿನ್ ಗಂಗಾನೆ, ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಡಾ.ವಿ.ಡಿ.ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.(ಕರ್ನಲ್) ಎಂ. ದಯಾನಂದ, ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts