ಜೀವನದಲ್ಲಿ ತಾಳ್ಮೆ ಅತಿ ಅಗತ್ಯ

vishwakarma.
vishwakarma.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜೀವನದಲ್ಲಿ ತಾಳ್ಮೆ ಅತಿ ಅಗತ್ಯ. ಸುಖ-ದುಃಖ ಇಂದ್ರಿಯ ಸ್ಪರ್ಶಗಳು ಮಾತ್ರ. ಅವು ಬಂದು ಹೋಗುವಂತವಲ್ಲದೆ ಶಾಶ್ವತವಲ್ಲ ಎನ್ನುವ ನಂಬಿಕೆಯಿದ್ದಲ್ಲಿ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ವೇಳೆ ಗುರುಪಾದುಕಾ ಪೂಜೆ, ವಿಶ್ವಕರ್ಮ ಸಹಕಾರ ಬ್ಯಾಂಕ್ ನಡೆಸುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪುರಾಣ ಪುರುಷರಾದ ಶ್ರೀರಾಮಚಂದ್ರ, ಶ್ರೀ ಕೃಷ್ಣ, ಸಂತರಾದ ತುಕಾರಾಮ ಏಕನಾಥ ಅವರ ಜೀವನದಲ್ಲಿ ಸುಖ-ದುಃಖ ಇದ್ದವು. ಅವರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಆದರೆ ಅವರೆಲ್ಲರ ಮುಖದಲ್ಲಿ ಎಂದು ಮುಗುಳು ನಗು ಮಾಸಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ತಾಳ್ಮೆ ಸಹನೆ ಎಂದರು.

ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಹರೀಶ್ ಆಚಾರ್ಯ, ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಡಿ.ಭಾಸ್ಕರ ಆಚಾರ್ಯ, ಸೀತಾರಾಮ ಆಚಾರ್ಯ ಬೆಳುವಾಯಿ, ಜಯಪ್ರಕಾಶ್ ಆಚಾರ್ಯ, ಜಗದೀಶ್ ಜೆ.ಆಚಾರ್ಯ ಕಪ್ಪೆಟ್ಟು, ಭರತ್ ಲೋಕೇಶ್ ಆಚಾರ್ಯ, ಹರಿಪ್ರಸಾದ್ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ ಮತ್ತು ಸಿಬ್ಬಂದಿ ವರ್ಗ, ಶಿಲ್ಪಿ ಪ್ರಭಾಕರ ಆಚಾರ್ಯ ಜೋಕಟ್ಟೆ, ಗಣೇಶ್ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ರವೀಂದ್ರ ಮಂಗಳಾದೇವಿ, ಸುಂದರ ಆಚಾರ್ಯ ಕಟಪಾಡಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶಿಷ್ಯ ವೃಂದದವರು ಗುರುಪಾದುಕಾ ಪೂಜೆಯಲ್ಲಿ ಭಾಗವಹಿಸಿದ್ದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಬಿ.ಸೂರ್ಯಕುಮಾರ್ ಹಳೆಯಂಗಡಿ, ಲೋಕೇಶ್ ಎಂ.ಬಿ.ಆಚಾರ್ಯ ಕಂಬಾರ್, ಮಹಾಸಂಸ್ಥಾನದ ಪ್ರಧಾನ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಉಪಸ್ಥಿತರಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net